ಗುರು ಹಿರಿಯರ ಮಾರ್ಗದರ್ಶನದಿಂದ ಸಾಧನೆ

 ಶೀಂಟೂರು ಸ್ಮತಿ ಕಾರ್ಯಕ್ರಮವನ್ನು ಪುತ್ತೂರು ಉಪ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ. ಉದ್ಘಾಟಿಸಿದರು. ಪ್ರಮುಖರಾದ ಡಾ.ಸುಂದರ್ ಕೇನಾಜೆ, ಅಶ್ವಿನ್ ಎಲ್.ಶೆಟ್ಟಿ, ಡಾ.ರೇವತಿ ನಂದನ್ ಮೊದಲಾದವರಿದ್ದರು.
ಶೀಂಟೂರು ಸ್ಮತಿ ಕಾರ್ಯಕ್ರಮವನ್ನು ಪುತ್ತೂರು ಉಪ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ. ಉದ್ಘಾಟಿಸಿದರು. ಪ್ರಮುಖರಾದ ಡಾ.ಸುಂದರ್ ಕೇನಾಜೆ, ಅಶ್ವಿನ್ ಎಲ್.ಶೆಟ್ಟಿ, ಡಾ.ರೇವತಿ ನಂದನ್ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ಪ್ರಪಂಚದಲ್ಲಿ ಬೆಲೆ ಕಟ್ಟಲಾಗದೇ ಇರುವಂತದ್ದು ತಂದೆ-ತಾಯಿಯ ಮೌಲ್ಯ, ಸವಣೂರು ಸೀತಾರಾಮ ರೈ ತಮ್ಮ ತಂದೆ-ತಾಯಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವುದರಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಕಾರಣವಾಯಿತು ಮತ್ತು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಪುತ್ತೂರು ಉಪ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಬಿ. ಹೇಳಿದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ಶುಕ್ರವಾರ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಶೀಂಟೂರು ನಾರಾಯಣ ರೈ 15ನೇ ವರ್ಷದ ದಿನಾಚರಣೆ ‘ಶೀಂಟೂರು ಸ್ಮತಿ’ ಹಾಗೂ ಶೀಂಟೂರು ಸನ್ಮಾನ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಸರ್ಕಾರಿ ಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ರೇವತಿ ನಂದನ್ ಶೀಂಟೂರು ಸನ್ಮಾನ ಸ್ವೀಕರಿಸಿದರು. ದ.ಕ. ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಸ್.ಶಶಿಧರ್, ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್.ಸುಂದರ ರೈ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿ ಶಂತನುಕೃಷ್ಣ ಸಂವಿಧಾನದ ಪೀಠಿಕೆ ವಾಚಿಸಿದರು. ಉಪನ್ಯಾಸಕಿ ಪ್ರತಿಭಾ ಎಸ್. ನಿರೂಪಿಸಿದರು. ಸಹಶಿಕ್ಷಕಿ ಚೇತನಾ ಸನ್ಮಾನಪತ್ರ ವಾಚಿಸಿದರು. ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್.ರೈ ವಂದಿಸಿದರು.

ವಿದ್ಯಾರ್ಥಿಗಳಾದ ನಿಮ್ಮಿಂದ ತಂದೆ ತಾಯಿಯವರಿಗೆ ಗೌರವ ದೊರೆಯುವಂತೆ ಮಾಡಿದಾಗ ಪಾಲಕರು ಸಂತೋಷ ಪಡುತ್ತಾರೆ. ಮಕ್ಕಳು ತಂದೆ-ತಾಯಿ ಮಾಡಿಟ್ಟ ಆಸ್ತಿಗಳಿಗೆ ಹಕ್ಕುದಾರರಾಗದೇ, ಅವರ ಆದರ್ಶಗಳಿಗೆ ಹಕ್ಕುದಾರರಾಗಬೇಕು.

— ಪ್ರಮೋದ್ ಕುಮಾರ್ ಬಿ. ಪುತ್ತೂರು ಉಪ ಪೊಲೀಸ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net