ಪರಿಶ್ರಮ, ಅಚಲ ಶ್ರದ್ಧೆ, ಪ್ರಯತ್ನದಿಂದ ಸಾಧನೆ

 ಕೋಟ ವಿವೇಕ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಿಶಿಷ್ಟ ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಮುಖರಾದ ವಸಂತ ಶೆಟ್ಟಿ, ಶ್ರೀಪತಿ ಹೇರ್ಳೆ, ಲಕ್ಷ್ಮೀನಾರಾಯಣ ಕಾರಂತ್, ಚೇಂಪಿ ರಮಾನಂದ ಭಟ್, ವೆಂಕಟೇಶ ಉಡುಪ, ಪ್ರೀತಿ ರೇಖಾ ಇದ್ದರು.
ಕೋಟ ವಿವೇಕ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಿಶಿಷ್ಟ ಸಾಧಕರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಮುಖರಾದ ವಸಂತ ಶೆಟ್ಟಿ, ಶ್ರೀಪತಿ ಹೇರ್ಳೆ, ಲಕ್ಷ್ಮೀನಾರಾಯಣ ಕಾರಂತ್, ಚೇಂಪಿ ರಮಾನಂದ ಭಟ್, ವೆಂಕಟೇಶ ಉಡುಪ, ಪ್ರೀತಿ ರೇಖಾ ಇದ್ದರು.
Published on
ಕೋಟ: ವಿವೇಕ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾತ್ರ ಬೋಧಿಸುವುದಲ್ಲ, ಅದರೊಂದಿಗೆ ಮುಂದೆ ಜೀವನದಲ್ಲಿ ಶಿಸ್ತು, ಸಂಯಮ, ಕರ್ತವ್ಯ ಪ್ರಜ್ಞೆ ಮೂಡಿಸುವ ಜತೆಗೆ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿದೆ. ಪರಿಶ್ರಮ, ಅಚಲ ಶ್ರದ್ಧೆ ಪ್ರಯತ್ನದೊಂದಿಗೆ ಶ್ರೇಷ್ಠ ಸ್ಥಾನ ಹೊಂದಲು ಸಾಧ್ಯ ಎಂದು ಉದ್ಯಮಿ ದಿನಕರ ಶೆಟ್ಟಿ ಹೇಳಿದರು.
ಕೋಟ ವಿದ್ಯಾಸಂಘದ ಆಡಳಿತ ಮಂಡಳಿ ಮತ್ತು ವಿದ್ಯಾಸಂಸ್ಥೆ ಆಶ್ರಯದಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾಸಂಘದ ಅಧ್ಯಕ್ಷ ಪಿ.ಭಾಸ್ಕರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಜತೆ ಕಾರ್ಯದರ್ಶಿ ಪಿ.ಮಂಜುನಾಥ ಉಪಾಧ್ಯ ಶುಭಹಾರೈಸಿದರು. ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಸೃಷ್ಟಿ, ಸಮೀಕ್ಷಾ, ಸಿಂಚನಾ, ಸುಜನ ಉಪಾಧ್ಯ ಅವರನ್ನು ಗೌರವಿಸಲಾಯಿತು.
ಸದಸ್ಯರಾದ ವಸಂತ ಶೆಟ್ಟಿ, ಶ್ರೀಪತಿ ಹೇರ್ಳೆ, ಲಕ್ಷ್ಮೀನಾರಾಯಣ ಕಾರಂತ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್, ಮುಖ್ಯಶಿಕ್ಷಕರಾದ ವೆಂಕಟೇಶ ಉಡುಪ, ಪ್ರೀತಿ ರೇಖಾ, ಪ್ರೇಮಾನಂದ ಉಪಸ್ಥಿತರಿದ್ದರು. ಪ್ರಾಂಶುಪಾಲ ಕೆ.ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಶಿವಪ್ರಸಾದ ಶೆಟ್ಟಿಗಾರ ಕಾರ್ಯಕ್ರಮ ನಿರ್ವಹಿಸಿದರು. ಸುಬ್ರಹ್ಮಣ್ಯ ಭಟ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net