ಬುದ್ಧಿವಂತಿಕೆ, ಕಾರ್ಯ ಚಾತುರ್ಯದಿಂದ ಸಾಧನೆ

 ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭೆಯನ್ನು ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ ಉದ್ಘಾಟಿಸಿದರು. ಗುರುರಾಜ್ ಗಂಟಿಹೊಳೆ, ಕಟ್ಟೆ ಶಂಕರ ಭಟ್ ನವೀಲುಗೊಣ, ಸುಬ್ರಮಣ್ಯ ಭಟ್ ಗುಂಡಿಬೈಲು, ಆನಂದ ಸಿ.ಕುಂದರ್, ಗುರುರಾಜ್ ಭಟ್, ಧರ್ಮರಾಜ್ ಜೈನ್, ಕುಶಲ್ ಶೆಟ್ಟಿ, ಕೃಷ್ಣ ಪೂಜಾರಿ ಅಪ್ಯಾಡಿ, ಎಚ್.ಜಯಶೀಲ ಎನ್.ಶೆಟ್ಟಿ ಮತ್ತಿತರರು ಇದ್ದರು.
ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭೆಯನ್ನು ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ ಉದ್ಘಾಟಿಸಿದರು. ಗುರುರಾಜ್ ಗಂಟಿಹೊಳೆ, ಕಟ್ಟೆ ಶಂಕರ ಭಟ್ ನವೀಲುಗೊಣ, ಸುಬ್ರಮಣ್ಯ ಭಟ್ ಗುಂಡಿಬೈಲು, ಆನಂದ ಸಿ.ಕುಂದರ್, ಗುರುರಾಜ್ ಭಟ್, ಧರ್ಮರಾಜ್ ಜೈನ್, ಕುಶಲ್ ಶೆಟ್ಟಿ, ಕೃಷ್ಣ ಪೂಜಾರಿ ಅಪ್ಯಾಡಿ, ಎಚ್.ಜಯಶೀಲ ಎನ್.ಶೆಟ್ಟಿ ಮತ್ತಿತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಬುದ್ಧಿವಂತಿಕೆ, ಕಾರ್ಯ ಚಾತುರ್ಯದಿಂದ ಸಾಧನೆ ಸಾಧ್ಯ. ಈ ನೆಲೆಯಲ್ಲಿ ಜಯಶೀಲ ಶೆಟ್ಟಿ ಅವರು ತಮ್ಮ ತಾಯಿಯ ಕನಸನ್ನು ನನಸು ವಾಡುವ ಮೂಲಕ ತಮ್ಮ ತಂದೆ ಹಾಕಿಕೊಟ್ಟ ಧರ್ಮದ ವಾರ್ಗದಲ್ಲಿ ಮುಂದುವರಿದು ಹೇರಂಜಾಲು ಎಂಬ ಪುಟ್ಟ ಧಾರ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ವಾಡಿದ್ದಾರೆ ಎಂದು ಕುಂದಾಪುರ ಶಾಸಕ ಕಿರಣ್ ಕುವಾರ್ ಕೊಡ್ಗಿ ಹೇಳಿದರು.
ಹೇರಂಜಾಲು ಗ್ರಾಮದ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ, ಅತಿರುದ್ರ ಮಹಾಯಾಗ ಹಾಗೂ ಇತರ ಧಾರ್ಮಿಕ ಕಾರ್ಯಗಳ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿ, ಧರ್ಮ, ಸಂಸ್ಕೃತಿಗಳು ಪುರುತ್ಥಾನಗೊಳ್ಳುವ ಧಾರ್ಮಿಕ ಕೇಂದ್ರವಾದ ದೇವಸ್ಥಾನ ಉದ್ಧಾರವಾದರೆ ಆ ಊರೇ ಶ್ರೇಷ್ಠತೆ ಹೊಂದಿದಂತೆ. ಪೂರ್ವಜನ್ಮದ ಸುಕೃತಫಲ ಹಾಗೂ ದೈವಾನುಗ್ರಹವಿದ್ದು ಕಾಲ ಕೂಡಿ ಬಂದಾಗ ಸತ್ಕಾರ್ಯಗಳು ನಡೆಯುತ್ತವೆ ಎಂದರು.
ಕಟ್ಟೆ ಶಂಕರ ಭಟ್ ನವೀಲುಗೊಣ ಹಾಗೂ ವಾಸ್ತುತಜ್ಞ ಸುಬ್ರಮಣ್ಯ ಭಟ್ ಗುಂಡಿಬೈಲು ಧಾರ್ಮಿಕ ಪ್ರವಚನ ನೀಡಿದರು. ಕೋಟ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಗುರುರಾಜ್ ಭಟ್, ಬೊಳಂಬಳ್ಳಿ ದೇವಳ ಆಡಳಿತ ಧರ್ಮದರ್ಶಿ ಧರ್ಮರಾಜ್ ಜೈನ್, ಉದ್ಯಮಿ ಕುಶಲ್ ಶೆಟ್ಟಿ, ಕೃಷ್ಣ ಪೂಜಾರಿ ಅಪ್ಯಾಡಿ, ಕಾಲ್ಲೋಡು ಶ್ರೀ ಮಹಾಲಸ ವಾರಿಕಾಂಬ ದೇವಸ್ಥಾನದ ಅರ್ಚಕ ರಾಮಯ್ಯ, ಹೇರಂಜಾಲು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಮೇರ್ಟ್, ಖಜಾಂಚಿ ಎಚ್.ವಿಜಯ್ ಶೆಟ್ಟಿ ಉಪಸ್ಥಿತರಿದ್ದರು.
ದೇವಳ ಗೌರವಾಧ್ಯಕ್ಷ ಎಚ್.ಜಯಶೀಲ ಎನ್.ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಹಾಗೂ ಆರ್‌ಜೆ ನಯನಾ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕ ವಾಜುರಾಜ್ ಶೆಟ್ಟಿ ವಂದಿಸಿದರು.

ಸರ್ವಸಿದ್ಧಿಗೆ ಸಾಧನೆಯೇ ಮುಖ್ಯ. ನಮ್ಮ ಜೀವನ ಒಂದು ಯಜ್ಞವಿದ್ದಂತೆ. ಯಜ್ಞ ವಾಡುವ ಮೊದಲು ಸಲಕರಣೆಗಳನ್ನು ಶುದ್ಧೀಕರಿಸುವಂತೆ ಪ್ರತಿಯೊಬ್ಬರೂ ತಮ್ಮ ತನು-ಮನಗಳನ್ನು ಕೆಲವು ವಿಧಿಪೂರ್ವಕ ಕರ್ಮಗಳಿಂದ ಪರಿಶುದ್ಧಗೊಳಿಸಬೇಕು. ಇಂತಹ ಕರ್ಮಗಳಿಗೆ ಅನೇಕ ನಡಾವಳಿಗಳನ್ನು ಋಷಿ ಮುನಿಗಳು, ಯೋಗಿಗಳು ಹಾಕಿಕೊಟ್ಟಿದ್ದಾರೆ. ಅಚಲವಾದ ನಂಬಿಕೆಯಿಂದ ಪ್ರಾರ್ಥಿಸಿದಲ್ಲಿ ದೇವರ ಪರಿಪೂರ್ಣ ಅನುಗ್ರಹವಾಗುತ್ತದೆ.

ಶ್ರೀ ಮಹಾಲಿಂಗೇಶ್ವರ ದೇವರ, ಗುರು ಹಿರಿಯರ ಹಾಗೂ ತಂದೆ-ತಾಯಿ ಆಶೀರ್ವಾದಿಂದ ನಾನು ಇಷ್ಟರ ಮಟ್ಟಿಗೆ ಬೆಳೆದೆ. ಬೇರನ್ನು ಮರೆತರೆ ಮರ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ನಾವು ಹಿಂದೆ ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ಪಾಠ ಕಲಿಸಿದ ಗುರುಗಳು, ಜನ್ಮಕೊಟ್ಟ ತಂದೆ ತಾಯಿಯನ್ನು ಯಾರು ಭಕ್ತಿಯಿಂದ ನೋಡುತ್ತಾರೋ ಅವರು ಬಹಳಷ್ಟು ಎತ್ತರಕ್ಕೆ ಬೆಳೆಯುತ್ತಾರೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net