ಕಠಿಣ ಪರಿಶ್ರಮ, ಏಕಾಗ್ರತೆಯಿಂದ ಸಾಧನೆ

ಇಡಿಯಡ್ಕ ದೇವಸ್ಥಾನದಲ್ಲಿ ಆಟೋಟ ಸ್ಪರ್ಧೆಯನ್ನು ಗಣೇಶ್ ಕುಂಬಳೆ ಉದ್ಘಾಟಿಸಿದರು. ಪ್ರಮುಖರಾದ ಬಿ.ಪಿ.ಶೇಣಿ, ರಾಮ್‌ಕುಮಾರ್, ರುಕ್ಮಿಣಿ ಸುವರ್ಣ, ರಾಮಣ್ಣ ಬಾಂಕಾನ, ರಾಮಣ್ಣ ಬಿ.ಸಿ. ಉಪಸ್ಥಿತರಿದ್ದರು.
ಇಡಿಯಡ್ಕ ದೇವಸ್ಥಾನದಲ್ಲಿ ಆಟೋಟ ಸ್ಪರ್ಧೆಯನ್ನು ಗಣೇಶ್ ಕುಂಬಳೆ ಉದ್ಘಾಟಿಸಿದರು. ಪ್ರಮುಖರಾದ ಬಿ.ಪಿ.ಶೇಣಿ, ರಾಮ್‌ಕುಮಾರ್, ರುಕ್ಮಿಣಿ ಸುವರ್ಣ, ರಾಮಣ್ಣ ಬಾಂಕಾನ, ರಾಮಣ್ಣ ಬಿ.ಸಿ. ಉಪಸ್ಥಿತರಿದ್ದರು.
Published on

ಕಾಸರಗೋಡು: ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಕೂಡಿದ ತರಬೇತಿಯಿಂದ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯ ಎಂದು ಕೇರಳ ರಾಜ್ಯ ಮಾಜಿ ಕಬಡ್ಡಿ ಕ್ಯಾಪ್ಟನ್ ಗಣೇಶ್ ಕುಂಬಳೆ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದ ಅಂಗವಾಗಿ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ದೇವಸ್ಥಾನದ ಸಭಾಂಗಣದಲ್ಲಿ ಸಮಾಜ ಬಾಂಧವರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಅಧ್ಯಕ್ಷ ಬಿ.ಪಿ.ಶೇಣಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕ ಅಧ್ಯಕ್ಷೆ ರುಕ್ಮಿಣಿ ಸುವರ್ಣ, ಕ್ರೀಡಾ ಸಮಿತಿ ಸಂಚಾಲಕ ರಾಮಣ್ಣ ಬಾಂಕಾನ, ರಾಮಣ್ಣ ಬಿ.ಸಿ., ಬಿಲ್ಲವ ಮುಖಂಡ ರಾಮ್‌ಕುಮಾರ್ ಉಪಸ್ಥಿತರಿದ್ದರು. ಘಟಕ ಕೋಶಾಧಿಕಾರಿ ಪದ್ಮನಾಭ ಸುವರ್ಣ ಸ್ವಾಗತಿಸಿದರು. ಪುರುಷೋತ್ತಮ ಬಿ.ಎಂ. ನಿರೂಪಿಸಿದರು. ಅಖಿಲೇಶ್ ಕಾನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net