ಕ್ರಿಯಾಶೀಲ ನಿರಂತರ ಪ್ರಯತ್ನದಿಂದ ಸಾಧನೆ

ಕುಂದಾಪುರದ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವವನ್ನು ಶಾಸಕ ಎ.ಕಿರಣ್​ ಕುಮಾರ್​ ಕೊಡ್ಗಿ ಉದ್ಘಾಟಿಸಿದರು. ಪ್ರಮುಖರಾದ ವ್ನಿಶ್ವರ ಭಟ್​, ಜೆ.ಪಿ.ಶೆಟಿ, ನಾಗರಾಜ ವೈದ್ಯ ಎಂ. ಮತ್ತಿತರರಿದ್ದರು.
ಕುಂದಾಪುರದ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವವನ್ನು ಶಾಸಕ ಎ.ಕಿರಣ್​ ಕುಮಾರ್​ ಕೊಡ್ಗಿ ಉದ್ಘಾಟಿಸಿದರು. ಪ್ರಮುಖರಾದ ವ್ನಿಶ್ವರ ಭಟ್​, ಜೆ.ಪಿ.ಶೆಟಿ, ನಾಗರಾಜ ವೈದ್ಯ ಎಂ. ಮತ್ತಿತರರಿದ್ದರು.
Published on
ಕುಂದಾಪುರ: ದೃಢತೆಯಿಂದ ಕೂಡಿದ ಅವಿರತವಾದ ಪರಿಶ್ರಮ, ತಾಳ್ಮೆ ಮತ್ತು ಸಹಿಷ್ಣುತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅವಿರತವಾದ ಶ್ರಮ ಎಂದರೆ ಕ್ರಿಯಾಶೀಲವಾದ ನಿರಂತರ ಪ್ರಯತ್ನ. ಕಷ್ಟ-ನಷ್ಟ, ಸೋಲು-ಗೆಲುವುಗಳೆದುರಾದಾಗ ಸಹನೆಯಿಂದ ಮುನ್ನಡೆದು ವಿದ್ಯಾರ್ಥಿ ಜೀವನದಲ್ಲಿ ಅನೇಕ ಮೂಲಗಳಿಂದ ಮೌಲ್ಯದಿಂದ ತುಂಬಿದ ಜ್ಞಾನ ಮತ್ತು ಕೌಶಲ ಸಂಪಾದಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಎ.ಕಿರಣ್​ ಕುಮಾರ್​ ಕೊಡ್ಗಿ ಹೇಳಿದರು.
ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಡಾಕ್ಟರೇಟ್​ ಪದವಿ ಪಡೆದ ಮನೋಹರ್​ ಬಿ., ಅನುಷಾ ಎಲ್​., ಪ್ರೇಮಾ ಆಚಾರಿ, ಮಂಗಳೂರು ವಿ.ವಿ. ಎಂ.ಕಾಂ. ಸ್ನಾತಕೋತ್ತರ ಪದವಿಯಲ್ಲಿ 2024&25ನೇ ಸಾಲಿನಲ್ಲಿ ದ್ವೀತಿಯ ರ್ಯಾಂಕ್​ ಪಡೆದ ರಚನಾ ಹಾಗೂ ಅಂತರ್​ ವಿ.ವಿ. ಕರಾಟೆ ಚಾಂಪಿಯನ್​ ಶಿಪ್​ನಲ್ಲಿ ಕಂಚಿನ ಪದಕ ವಿಜೇತ ಭರತ್​ ಹೂಗಾರ್​, ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ಪ್ರಥಮ ಬಿ.ಎಸ್ಸಿ. ತರಗತಿಯ ಸೌಭಾಗ್ಯ ಶೆಣೈ ಅವರನ್ನು ಗೌರವಿಸಲಾಯಿತು.
ಬಿದ್ಕಲ್​ಕಟ್ಟೆ ಕರ್ನಾಟಕ ಪಬ್ಲಿಕ್​ ಸ್ಕೂಲ್​ ಪ್ರಾಂಶುಪಾಲ ವ್ನಿಶ್ವರ ಭಟ್​, ಅರಣ್ಯ ಗುತ್ತಿಗೆದಾರ ಜೆ.ಪಿ.ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಸ್ವಾಗತಿಸಿದರು. ಡಾ.ಉದಯ ಶೆಟ್ಟಿ ಕೆ., ರವಿಚಂದ್ರ ಎಚ್​.ಎಸ್​., ಡಾ.ಶೇಖರ ಬಿ., ಶೃತಿ ಆಚಾರ್ಯ ಎನ್​., ಡಾ.ಭಾಗೀರಥಿ ನಾಯ್ಕ, ಡಾ.ಮನೋಹರ ಬಿ. ಬಹುಮಾನಿತರ ಪಟ್ಟಿ, ಐಕ್ಯುಎಸಿ ಸಂಚಾಲಕ ನಾಗರಾಜ ಯು. ವಾರ್ಷಿಕ ವರದಿ ವಾಚಿಸಿದರು. ನಿರಂಜನ ಶರ್ಮ ನಿರೂಪಿಸಿದರು. ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಕೃತಿಕ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net