ಕುಂದಾಪುರದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ

ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕಿರಣ್ ದೇವಾಡಿಗ, ಯೂಸುಫ್ ಸಲೀಮ್, ಸಂಭ್ರಮ್ ನವೀನ್, ದೀಪಾ ಮತ್ತಿತರರಿದ್ದರು.
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಕಿರಣ್ ದೇವಾಡಿಗ, ಯೂಸುಫ್ ಸಲೀಮ್, ಸಂಭ್ರಮ್ ನವೀನ್, ದೀಪಾ ಮತ್ತಿತರರಿದ್ದರು.
Published on
ಕುಂದಾಪುರ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಟಕ ಹಾಗೂ ಕನ್ನಡ ವಿಭಾಗ ಆಶ್ರಯದಲ್ಲಿ ಜೆಸಿಐ ಕುಂದಾಪುರ ಸಿಟಿ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಸಹ್ಯಾದ್ರಿ ಆಫ್ ಇಂಜಿನಿಯರಿಂಗ್- ವ್ಯಾನೇಜ್‌ಮೆಂಟ್‌ನ ಸಹಾಯಕ ಪ್ರಾಧ್ಯಾಪಕಿ ಪೂಜಾ ಯಶವಂತ ರೈ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಡಾ.ಕೆ.ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹೆವ್ಮಾಡಿಯ ಜಯಶ್ರೀ ವಿನಯ ಪೂಜಾರಿ, ಕಾಲೇಜಿನ ಬಹುಮುಖ ಪ್ರತಿಭೆಗಳಾದ ಶ್ರೇಯಾ ಖಾರ್ವಿ, ಬ್ರಾಹ್ಮೀ, ಶೈಕ್ಷಣಿಕ ಪ್ರತಿಭೆಗಳಾದ ಐಶ್ವರ್ಯಾ ಶೆಟ್ಟಿ, ಗೌತಮಿ, ಕ್ರೀಡಾ ಪ್ರತಿಭೆಗಳಾ ಲಕ್ಷ್ಮೀ ಶೆಟ್ಟಿ, ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಝರಾ ಎಂ.ಇವ್ರಾನ್ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಾಧಕಿಯರ ಭಾಷಣ ಮತ್ತು ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ಕಿರಣ್ ದೇವಾಡಿಗ, ಜೇಸಿಐ ಕುಂದಾಪುರ ಸಿಟಿಯ ನಿಕಟಪೂರ್ವ ಅಧ್ಯಕ್ಷ ಯೂಸುಫ್ ಸಲೀಮ್, ಕಾರ್ಯದರ್ಶಿ ಸಂಭ್ರಮ್ ನವೀನ್, ಲೇಡಿ ಜೇಸಿ ಸಂಯೋಜಕಿ ದೀಪಾ, ಸದಸ್ಯೆ ಲಕ್ಷ್ಮೀ, ಯುವ ಜೇಸಿ ಚೇರ್ ಪರ್ಸನ್ ರಾಹುಲ್ ಗೋಡೆ, ಕಾಲೇಜಿನ ಮಹಿಳಾ ಸಬಲೀಕರಣ ಟಕ ಸಂಯೋಜಕಿ ರಶ್ಮಿ ಗಾವಡಿ, ರವೀನಾ ಸಿ. ಪೂಜಾರಿ, ವಿಜಯಶ್ರೀ ಎ. ಉಪಸ್ಥಿತರಿದ್ದರು. ಹುಸೇನ್ ಹೈಕಾಡಿ ಪ್ರಸ್ತಾವನೆಗೈದರು. ವೀಣಾ ವಿ.ಭಟ್ ಅತಿಥಿಗಳನ್ನು ಪರಿಚಯಿಸಿದರು.
ಡಾ.ಸೋನಿ ಡಿಕೋಸ್ಟಾ, ಡಾ.ಸರೋಜಾ ಹಾಗೂ ರೇಷ್ಮಾ ಶೆಟ್ಟಿ, ಪ್ರವೀಣಾ ಎಂ.ಪೂಜಾರಿ, ರಶ್ಮಿತಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ನಂದಾ ರೈ ಬಹುವಾನ ವಿಜೇತರ ಪಟ್ಟಿ ವಾಚಿಸಿದರು. ಡಾ.ಚೇತನಾ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಸುಕೇಶ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net