ಅಪಘಾತ ಗಾಯಾಳು ಸಾವು

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕುಯಿರ ನಾಯ್ಕ
ಕುಯಿರ ನಾಯ್ಕ
Published on: 

ಬೆಳ್ವೆ: ಅಪಘಾತದಿಂದ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳ್ವೆ ಹೆದ್ದಾರಿ ಜೆಡ್ಡು ನಿವಾಸಿ ಕುಯಿರ ನಾಯ್ಕ(61) ಎಂಬುವರು ಚಿಕಿತ್ಸೆ ಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

ಅವರು ಮಂಗಳವಾರ ಸಂಜೆ ಬೆಳ್ವೆಯಿಂದ ತಾರಿಕಟ್ಟೆ ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೆಳ್ವೆ ಕಡೆಯಿಂದ ಕೃಷ್ಣ ಎಂಬುವರು ಅಜಾಗರೂಕತೆಯಿಂದ ಬೈಕ್ ಓಡಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ.

ಘಟನೆಯಿಂದ ತಲೆ, ಎಡಗೈ, ಎಡ ಕಾಲಿಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net