ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಾದ ಬಪ್ಪನಾಡು ದೇವಸ್ಥಾನದ ಎದುರು, ಮೂಲ್ಕಿ ಬಸ್ ನಿಲ್ದಾಣ, ವಿಜಯ ಸನ್ನಿಧಿ, ಕಾರ್ನಾಡ್ ಬೈಪಾಸ್, ಕೋಲ್ನಾಡ್, ಪಡುಪಣಂಬೂರು ಪೆಟ್ರೋಲ್ ಬಂಕ್ ಮತ್ತು ಹಳೆಯಂಗಡಿ-ಪಾವಂಜೆ ಜಂಕ್ಷನ್‌ಗಳು ನಿತ್ಯ ಅಪಘಾತದ ಕೇಂದ್ರಗಳಾಗಿವೆ. ಸೂಕ್ತ ಸರ್ವೀಸ್ ರಸ್ತೆ ಇಲ್ಲದ ಕಾರಣ ವಾಹನಗಳು ಏಕಾಏಕಿ ‘ಯೂ-ಟರ್ನ್’ ಪಡೆದು ವಿರುದ್ಧ ದಿಕ್ಕಿನಲ್ಲಿ ಚಲಿಸುವುದೇ ಮಾರಣಾಂತಿಕ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.