ಪಾಲಿಮಾರು ಯೋಗ ದೀಪಿಕಾ ವಿದ್ಯಾಪಿಠದ ಶ್ರೀಶ ಭಟ್ ಕನ್ನರ್ಪಾಡಿ (ವೇದ), ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ನ 7ನೇ ತರಗತಿಯ ವಿದ್ಯಾರ್ಥಿನಿ ಆದ್ಯಾ ಯು. (ತಬಲಾ), ಪುತ್ತೂರು ವಿವೇಕಾನಂದ ಸೆಂಟ್ರಲ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಆಪ್ತಾ ಚಂದ್ರಮತಿ ಮುಳಿಯ (ವಿಜ್ಞಾನ), ಮಣಿಪಾಲದ ಮಾಧವ ಕೃಪಾ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸ್ವಸ್ತಿ ಎಂ. ಭಟ್ (ಸಂಗೀತ), ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಶಾಂತ್ ಎಸ್. ಭಟ್ (ಯಕ್ಷಗಾನ) ಇವರಿಗೆ ಪ್ರಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.