

ಚಾರ ಕುಚ್ಚೂರು ಗ್ರಾಮದ ರೈತರು ಅಣೆಕಟ್ಟಿನಿಂದ ಪ್ರಯೋಜನ ಪಡೆದಿದ್ದಾರೆ. ಬಾವಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಅನೇಕರಿಗೆ ಕುಡಿಯುವ ನೀರಿಗೆ ಉಪಯೋಗವಾಗಿದೆ. ಈ ವರ್ಷ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬೇಸಿಗೆಯಲ್ಲಿ ನೀರು ಬರಿದಾಗುವುದು ತಪ್ಪುತ್ತದೆ. ಅಣೆಕಟ್ಟು ನೀರು ಎಲ್ಲರಿಗೂ ಸದುಪಯೋಗ ಆಗಬೇಕು.
ಒಂದು ವಾರದೊಳಗೆ ಇಲ್ಲಿಯ ಸಣ್ಣಪುಟ್ಟ ಕೆಲಸಗಳು ಮುಗಿಯುತ್ತದೆ. ಅಣೆಕಟ್ಟಿನಿಂದಾಗಿ ಸ್ಥಳೀಯ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಕೃಷಿಕರಿಗೆ ಉಪಯೋಗ ಆಗಿದೆ. ಪೈಪ್ ಒಡೆದಾಗ ನೀರು ಪೋಲಾಗುವುದನ್ನು ತಪ್ಪಿಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು.