ಗುರುವಾರ ಬೆಳಗ್ಗಿನ ಜಾವ ಪ್ರಸಾದ್ ರಬಡ ಭಟ್ಕಳದಲ್ಲಿರುವ ಬಗ್ಗೆ ದೊರಕಿದ ಖಚಿತ ವಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಟ್ ಆರೋಪಿಯಾಗಿದ್ದ ಈತನ ಮೇಲೆ ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ 4, ಕುಂದಾಪುರ ನಗರ ಠಾಣೆಯಲ್ಲಿ 2 ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ 1ರಂತೆ ಕೊಲೆ ಯತ್ನ, ಕಳ್ಳತನ, ಎನ್‌ಡಿಪಿಎಸ್‌ನಂತಹ ಒಟ್ಟು 7 ಪ್ರಕರಣಗಳು ದಾಖಲಾಗಿತ್ತು. ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈತನ ವಿರುದ್ಧ ವಾರಂಟ್ ಹೊರಡಿಸಿತ್ತು.