ಸಾಧಕಿ ಡಾ.ದಿಯಾ ಆಳ್ವ, ಸ್ವಾತಿ, ಲಕ್ಷ್ಮಣಿ ಜಯ ಶೆಟ್ಟಿ ಕಿನ್ನಿಗೋಳಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಪ್ರತಿಭೆಗಳನ್ನು ಪ್ರತಿಭಾ ಪುರಸ್ಕಾರದಡಿ ಗೌರವಿಸಲಾಯಿತು. ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಪದವಿ ಕಾಲೇಜಿನ ಮಾಜಿ ಪ್ರಾಧ್ಯಾಪಕಿ ಆಶಾಲತಾ ಶೆಟ್ಟಿ, ಕಿನ್ನಿಗೋಳಿ ಪಪಂ ಸದಸ್ಯರಾದ ದಾಮೋದರ ಶೆಟ್ಟಿ, ಕೋಕಿಲ ಡಿ.ಅಮೀನ್, ಪ್ರಕಾಶ್ ಆಚಾರ್ಯ, ಆದರ್ಶ ಬಳಗ ಅಧ್ಯಕ್ಷ ಯುವರಾಜ ಶೆಟ್ಟಿ, ಬಾಲ ಗಣೇಶೋತ್ಸ ಅಧ್ಯಕ್ಷ ಸತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಮೀರಾ ಶೆಟ್ಟಿ ಕೊಡೆತ್ತೂರು ಸ್ವಾಗತಿಸಿದರು. ಅಮಿತಾ ದಯಾನಂದ, ಅನುಷಾ ಕೊಡೆತ್ತೂರು ಸನ್ಮಾನ ಪತ್ರ ವಾಚಿಸಿದರು. ಸಂಧ್ಯಾ ರಾಜರಾಮ್ ವರದಿ ವಾಚಿಸಿದರು. ರೇವತಿ ಪುರುಷೋತ್ತಮ್ ನಿರೂಪಿಸಿದರು.