ಉಪ್ಪಿನಂಗಡಿ ದೇವಳದಲ್ಲಿ ಆರಾಟ ಉತ್ಸವ

ಆರಾಟ ಉತ್ಸವ ಅಂಗವಾಗಿ ಉಪ್ಪಿನಂಗಡಿಯ ಹೊಸ ಹಾಗೂ ಹಳೇ ಬಸ್ ನಿಲ್ದಾಣಗಳ ಕಟ್ಟೆಗಳಲ್ಲಿ ದೇವರ ಕಟ್ಟೆಪೂಜೆ ನಡೆಯಿತು.
ಆರಾಟ ಉತ್ಸವ ಅಂಗವಾಗಿ ಉಪ್ಪಿನಂಗಡಿಯ ಹೊಸ ಹಾಗೂ ಹಳೇ ಬಸ್ ನಿಲ್ದಾಣಗಳ ಕಟ್ಟೆಗಳಲ್ಲಿ ದೇವರ ಕಟ್ಟೆಪೂಜೆ ನಡೆಯಿತು.
Published on
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವರ್ಷಾವಧಿ ಉತ್ಸವ ಪ್ರಯುಕ್ತ ಶ್ರೀ ದೇವರ ಆರಾಟ ಉತ್ಸವ ಶುಕ್ರವಾರ ರಾತ್ರಿ ಉಪ್ಪಿನಂಗಡಿಯ ಪ್ರಮುಖ ಬೀದಿಗಳಲ್ಲಿ ಸಾಗಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಅವಭೃತ ಸ್ನಾನ ನಡೆದು ಧ್ವಜಾವರೋಹಣವಾಯಿತು.
ಆರಾಟ ಉತ್ಸವ ಅಂಗವಾಗಿ ಉಪ್ಪಿನಂಗಡಿಯ ಹೊಸ ಹಾಗೂ ಹಳೇ ಬಸ್ ನಿಲ್ದಾಣಗಳ ಕಟ್ಟೆಗಳಲ್ಲಿ ದೇವರ ಕಟ್ಟೆಪೂಜೆ ನೆರವೇರಿತು. ಹೊಸ ಬಸ್ ನಿಲ್ದಾಣದಲ್ಲಿ ಪೂಜೆ ನೇತೃತ್ವ ವಹಿಸಿದ್ದ ವಿಶ್ವ ಹಿಂದೂ ಪರಿಷತ್‌ನಿಂದ ವಯಲಿನ್ ಸಹಿತ ಚೆಂಡೆ ವಾದನ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಹಳೇ ಬಸ್ ನಿಲ್ದಾಣದಲ್ಲಿ ಗೆಳೆಯರು -94 ನೇತೃತ್ವದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಂಧಾರಿ ಕಲೆಯಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಶಮಿಕಾ ಎಂ.ಕೆ., ಸಂಶೋಧನಾತ್ಮಕ ಪಿಎಚ್.ಡಿ ಪದವಿ ಪಡೆದ ನೇತ್ರಾವತಿ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್, ಸಮಿತಿ ಸದಸ್ಯರಾದ ಹರೀಶ್ ಉಪಾಧ್ಯಾಯ, ಬಿ.ಗೋಪಾಲಕೃಷ್ಣ ರೈ, ಸೋಮನಾಥ, ಡಾ.ರಮ್ಯಾ ರಾಜಾರಾಮ್, ಅನಿತಾ ಕೇಶವ ಗೌಡ, ಕೃಷ್ಣ ರಾವ್ ಅರ್ತಿಲ, ದೇವಿದಾಸ್ ರೈ ಬಿ., ಎಂ.ವೆಂಕಪ್ಪ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಕವಿತಾ ಎಂ., ಮಾಜಿ ಶಾಸಕ ಸಂಜೀವ ಮಠಂದೂರು, ಚಂದಪ್ಪ ಮೂಲ್ಯ, ಡಾ.ರಾಜಾರಾಮ ಕೆ.ಬಿ., ಕರುಣಾಕರ ಸುವರ್ಣ, ಸುಂದರ ಗೌಡ, ಸುದರ್ಶನ ಎಂ., ಯು.ರಾಮ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುಜೀರ್ ಗಣಪತಿ ನಾಯಕ್, ಕೈಲಾರ್ ರಾಜಗೋಪಾಲ ಭಟ್, ಕೆ.ಜಗದೀಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಯು.ಜಿ.ರಾಧಾ, ಎನ್.ಗೋಪಾಲ ಹೆಗ್ಡೆ, ಲೋಕೇಶ್ ಹೆಗ್ಡೆ, ಗುಣಕರ ಅಗ್ನಾಡಿ, ವಿಜಯ ಕುಮಾರ್, ಅಚಲ್ ಉಬರಡ್ಕ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net