ಬೈಂದೂರು ಆಡಳಿತ ಸೌಧದ ಆಧಾರ್ ಕೇಂದ್ರ ಸ್ಥಗಿತ

ಆಧಾರ್ ಕಾರ್ಡ್ ಸಾಂದರ್ಭಿಕ ಚಿತ್ರ
ಆಧಾರ್ ಕಾರ್ಡ್ ಸಾಂದರ್ಭಿಕ ಚಿತ್ರ
Published on


ವಿಜಯವಾಣಿಸುದ್ದಿಜಾಲ ಬೈಂದೂರು

ಬೈಂದೂರುತಾಲೂಕು ಆಡಳಿತಸೌಧದ ಆಡಳಿತವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದುಒಂದೆಡೆಯಾದರೆ ಮೂರು ತಿಂಗಳಿನಿಂದಆಡಳಿತಸೌಧದ ಆಧಾರ್‌ಕಾರ್ಡ್ಕೇಂದ್ರ ತಾಂತ್ರಿಕ ಸಮಸ್ಯೆಯಿಂದಸ್ಥಗಿತಗೊಂಡಿದ್ದು,ಗ್ರಾಮೀಣಭಾಗದ ಜನರಿಗೆ,ವಿದ್ಯಾರ್ಥಿಗಳಕೆಲಸಗಳಿಗೆ ಸಮಸ್ಯೆಗಳಾಗುತ್ತಿವೆ.

ವಿವಿಧಗ್ರಾಮಗಳಿಂದ ಜನರು 25ಕಿ.ಮೀ.ದೂರದಲ್ಲಿರುವಬೈಂದೂರಿನ ಆಡಳಿತ ಸೌಧಕ್ಕೆಬರಬೇಕಾದ ಅನಿವಾರ್ಯತೆ ಇದ್ದು,ಆಧಾರ್ತಿದ್ದುಪಡಿ ಹಾಗೂ ನೋಂದಣಿ ಸಹಿತವಿವಿಧ ಸೇವೆಗಳ ಅಲಭ್ಯತೆಯಿಂದಸಾರ್ವಜನಿಕರಿಗೆ ಭಾರಿತೊಂದರೆಗಳಾಗುತ್ತಿವೆ.ಕೆಲವುವಿದ್ಯಾರ್ಥಿಗಳು ಕಾಲೇಜು ದಾಖಲಾತಿ,ಪರೀಕ್ಷೆಹಾಗೂ ಸರ್ಕಾರಿ ಸವಲತ್ತು ಪಡೆಯಲುಪರದಾಡುವಂತಾಗಿದೆ.ಈಬಗ್ಗೆ ವಿಚಾರಿಸಿದರೆ ಅಧಿಕಾರಿಗಳುಸರಿಯಾಗಿ ಸ್ಪಂದಿಸುವುದಿಲ್ಲಎಂಬ ದೂರುಗಳಿವೆ.

ವಿವಿಧದಾಖಲೆಗಳ ನೋಂದಣಿ,ಆಧಾರ್‌ಕಾರ್ಡ್ತಿದ್ದುಪಡಿ,ಕೃಷಿಸವಲತ್ತಿಗೆ ಹಾಗೂ ಸರ್ಕಾರಿವಿದ್ಯಾರ್ಥಿವೇತನಕ್ಕೆ ಅರ್ಜಿಸಲ್ಲಿಕೆ ಸಹಿತ ವಿವಿಧ ಕೆಲಸಗಳಿಗೆತೊಡಕಾಗಿದೆ.ತಾಂತ್ರಿಕಸಮಸ್ಯೆಯನ್ನು ನಿವಾರಿಸಿ ಆಧಾರ್ಕೇಂದ್ರ ಕಾರ್ಯಾರಂಭಿಸಿ ಜನರಿಗೆಸೇವೆ ಸಿಗುವಂತೆ ಮಾಡಬೇಕೆಂದುಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಧಾರ್ ಕಾರ್ಡ್ ವಿಭಾಗ ತಾಂತ್ರಿಕ ಸಮಸ್ಯೆಯಿಂದಾಗಿ ಎರಡೂವರೆ ತಿಂಗಳಿಂದ ಸ್ಥಗಿತಗೊಂಡಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಶ್ರೀವೇ ವ್ಯವಸ್ಥೆ ಸರಿಪಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net