ಕೆಲಸಕ್ಕೆದ್ದ ತೆರಳಿದ್ದ ಯುವತಿ ನಾಪತ್ತೆ

MISSING
MISSING
Published on

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳದ ವ್ಯಾಪಾರಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪೈವಳಿಕೆ ಆಜಾದ್‌ನಗರ ನಿವಾಸಿ ಫಾತಿಮತ್ ಮಕ್ಸಾನ್ (19) ನಾಪತ್ತೆಯಾದ ಯುವತಿ. ಮನೆಯಿಂದ ಕೆಲಸಕ್ಕೆಂದು ಉಪ್ಪಳಕ್ಕೆ ತೆರಳಿದ್ದ ಈಕೆ ಸಂಜೆಯಾದರೂ ಮನೆಗೆ ವಾಪಸಾಗದಿರುವ ಬಗ್ಗೆ ಯುವತಿಯ ತಾಯಿ ನೀಡಿದ ದೂರಿನನ್ವಯ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net