ಸುಳ್ಯದ ಯುವತಿ ಕರ್ನೂಲ್‌ನಲ್ಲಿ ಮೃತ್ಯು

ಕಾರು ಅಫಘಾತದಲ್ಲಿ ಮೃತಪಟ್ಟಿರುವ ಯುವತಿ ಕ್ಷಿಪ್ರ
ಕಾರು ಅಫಘಾತದಲ್ಲಿ ಮೃತಪಟ್ಟಿರುವ ಯುವತಿ ಕ್ಷಿಪ್ರ
Published on
ಪುತ್ತೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಶಿವಾನಿ ಶಿರಗುಪ್ಪ ರಸ್ತೆಯಲ್ಲಿ ಶನಿವಾರ ರಾತ್ರಿ ಕಾರು ಅಫಘಾತದಲ್ಲಿ, ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸುಳ್ಯ ತಾಲೂಕಿನ ಕಂದಡ್ಕ ನಿವಾಸಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ.
ಕುಂದಡ್ಕ ನಿವಾಸಿ ಶಶಿಕಲಾ ಅವರ ಏಕಮಾತ್ರ ಪುತ್ರಿ ಕ್ಷಿಪ್ರ ಮೃತಪಟ್ಟಿರುವ ಯುವತಿ. ಕ್ಷಿಪ್ರ ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ, ನಿಟ್ಟೆಯಲ್ಲಿ ಎಂ.ಟೆಕ್ ಮುಗಿಸಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ತನ್ನ ತಾಯಿಯ ಜತೆಗೆ ನೆಲೆಸಿದ್ದರು.
ಸಹದ್ಯೋಗಿಗಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಕಾರು ಅಪಘಾವಾಗಿ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇತರರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net