ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ನಿವಾಸಿ ಯುವಕನೊಬ್ಬ ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರಟು ಹೋದವರು ಕಾಣೆಯಾಗಿರುವ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೇನಾಲ ನಿವಾಸಿ ಸಣ್ಣ ಚೋಮ ಎಂಬುವರ ಪುತ್ರ ಕೊರಗಪ್ಪ ಯಾನೆ ಗೋಪಾಲ(42) ಕಾಣೆಯಾದವರು.
ಅವಿವಾಹಿತರಾಗಿರುವ ಕೊರಗಪ್ಪ ಕೂಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮುಂಜಾನೆ ವೇಳೆ ಮನೆಯಲ್ಲಿ ಏನೂ ತಿನ್ನದೆ ಮನೆಯಿಂದ ಹೊರಟು ಹೋದವರು ಮರಳಿ ಮನೆಗೆ ಬಂದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಕೊರಗಪ್ಪ ಅವರ ಸಹೋದರ ಸಂಪ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.