

ಪುತ್ತೂರು ಗ್ರಾಮಾಂತರ: ಕೊಳ್ತಿಗೆ ಗ್ರಾಮದ ಕುಂಟಿಕಾನ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಲಗ್ಗೆಯಿಟ್ಟು ಅಪಾರ ಕೃಷಿ ಹಾನಿ ಮಾಡಿದೆ. ಪಕ್ಕದ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯಲ್ಲಿ ಚಿರತೆಯೊಂದು ನಾಯಿಯನ್ನು ಕೊಂದು ಹಾಕಿರುವ ಮಾಹಿತಿಯೂ ಇದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ನಾಯಿ ಬೊಗಳುವುದನ್ನು ಕೇಳಿ ಮನೆಯವರು ಎಚ್ಚರಗೊಂಡಾಗ ಚಿರತೆ ಪರಾರಿಯಾಗಿದೆ. ಅಲ್ಲಿಂದ ತೆರಳಿದ ಚಿರತೆ ಮನೆ ಸಮೀಪದ ಪೆರ್ನಾಜೆ ನೂಜಿಬೈಲು ರಸ್ತೆಯ ಬದಿಯಲ್ಲಿ ನಾಯಿಯೊಂದನ್ನು ಕೊಂದು ಹಾಕಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ಪೆರ್ನಾಜೆಯ ಅಶ್ವಿನ್ ತಿಳಿಸಿದ್ದಾರೆ.