ಕಾವು-ಈಶ್ವರಮಂಗಲ-ಪಳ್ಳತ್ತೂರು ಅಂತಾರಾಜ್ಯ ಸಂಪರ್ಕ ರಸ್ತೆ ಸಾಂತ್ಯ ತಿರುವು ಭಾಗದಲ್ಲಿ ಭಾರಿ ಗಾಳಿ-ಮಳೆಗೆ ಮರಗಳೆರಡು ಉರುಳಿ ವಿದ್ಯುತ್ ಕಂಬ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಕೆಲವು ಕಂಬಗಳು ವಾಲಿ ನಿಂತಿದ್ದು, ವಿದ್ಯುತ್ ತಂತಿಗಳು ರಸ್ತೆ ಮೇಲೆ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಕಾವು-ಈಶ್ವರಮಂಗಲ ಮೂಲಕವಾಗಿ ಪಳ್ಳತ್ತೂರು, ಕರ್ನೂರು-ಗಾಳಿಮುಖ, ದೇಲಂಪಾಡಿ, ಸುಳ್ಯಪದವು ಕಡೆಗಳಿಗೆ ಹೋಗುವ ವಾಹನಗಳ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಮೆಸ್ಕಾಂ ಇಲಾಖೆ ಹಾಗೂ ಸ್ಥಳೀಯರು ಮರ, ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೆಸ್ಕಾಂನಿಂದ ವಿದ್ಯುತ್ ದುರಸ್ತಿ ಕಾರ್ಯ ನಡೆಯಿತು.