ಯಕ್ಷಗಾನ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆ

 ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹೆರೆಂಜಾಲು ಸುಬ್ಬಣ್ಣ ಗಾಣಿಗ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಮುಖರಾದ ಉದಯ ಕುಮಾರ್, ನಿತಿನ್ ನಾರಾಯಣ ಗಾಣಿಗ ಬೆಂಗಳೂರು, ಗಣೇಶ್ ಜಿ.ಚೆಲ್ಲೆಮಕ್ಕಿ, ಗೋಪಾಲ ಗಾಣಿಗ ಗಂಗೊಳ್ಳಿ ಇದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹೆರೆಂಜಾಲು ಸುಬ್ಬಣ್ಣ ಗಾಣಿಗ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಮುಖರಾದ ಉದಯ ಕುಮಾರ್, ನಿತಿನ್ ನಾರಾಯಣ ಗಾಣಿಗ ಬೆಂಗಳೂರು, ಗಣೇಶ್ ಜಿ.ಚೆಲ್ಲೆಮಕ್ಕಿ, ಗೋಪಾಲ ಗಾಣಿಗ ಗಂಗೊಳ್ಳಿ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಟ
ಯಕ್ಷಗಾನ ಕಲೆಗೆ ಹಾರಾಡಿ ಮನೆತನ ಹಾಗೂ ಗಾಣಿಗ ಸಮಾಜದ ಕೊಡುಗೆ ಅವಿಸ್ಮರಣೀಯ. ಡಾ.ಶಿವರಾಮ ಕಾರಂತರ ತಂಡದಲ್ಲಿ ಗಾಣಿಗ ಸಮಾಜದ ಕಲಾವಿದರಿಗೆ ಅಗ್ರ ಪಾಲಿತ್ತು. ಇದೆಲ್ಲ ಗಾಣಿಗ ಸಮಾಜ ಯಕ್ಷಗಾನ ಕ್ಷೇತ್ರದಲ್ಲಿ ಸಾಧಿಸಿದ ಅಗ್ರಗಣ್ಯ ಸಾಧನೆಯನ್ನು ಬಿಂಬಿಸುತ್ತದೆ ಎಂದು ಯಕ್ಷಗಾನ ಕೇಂದ್ರ ಉಡುಪಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಹೇಳಿದರು.
ಕೋಟ ವಿವೇಕ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಕೋಟ ಗಾಣಿಗ ಯುವ ಸಂಘಟನೆ ಆಶ್ರಯದಲ್ಲಿ ಯುವ ಸಂಗಮ ಕಾರ್ಯಕ್ರಮ ಅಂಗವಾಗಿ ಯಕ್ಷಗಾನ ಕಲಾವಿದ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಹೆರಂಜಾಲು ಸುಬ್ಬಣ್ಣ ಗಾಣಿಗ ಅವರಿಗೆ ಪ್ರದಾನಿಸಲಾಯಿತು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಕೋಟ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಟಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕುಮಾರ್, ಉದ್ಯಮಿ ನಿತಿನ್ ನಾರಾಯಣ ಗಾಣಿಗ ಬೆಂಗಳೂರು, ವೇಣುಗೋಪಾಲಕೃಷ್ಣ ಎಜುಕೇಶನ್ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಗಣೇಶ್ ಜಿ.ಚೆಲ್ಲೆಮಕ್ಕಿ, ಹೋಟೆಲ್ ಉದ್ಯಮಿ ಗೋಪಾಲ ಗಾಣಿಗ ಗಂಗೊಳ್ಳಿ, ಗಾಣಿಗ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಕೋಟ, ಪ್ರಮುಖರಾದ ನಾಗರಾಜ ಗಾಣಿಗ ಸಾಲಿಗ್ರಾಮ, ವಾಸುದೇವ ಬೈಕಾಡಿ, ವಿಶ್ವನಾಥ ಕಾರ್ತಟ್ಟು, ಜನಾರ್ದನ ಬ್ರಹ್ಮಾವರ, ವಸಂತಿ ರಾಜು ಕಾರ್ತಟ್ಟು, ಪ್ರಶಾಂತ ಗಾಣಿಗ ಕಾರ್ಕಡ, ಕಿರಣ್ ಗಾಣಿಗ ಗೆಂಡಕೆರೆ, ರಘುರಾಮ ಬೈಕಾಡಿ, ರೇಖಾ ಗಣೇಶ ಚಿತ್ರಪಾಡಿ, ಜಯಂತಿ ವಾಸುದೇವ ಬೈಕಾಡಿ ಮತ್ತಿತರರು ಉಪಸ್ಥಿತರಿದ್ದರು. ಆರ್.ಕೆ.ಬ್ರಹ್ಮಾವರ ಸ್ವಾಗತಿಸಿದರು. ಪ್ರಣುತ್ ಆರ್.ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಆನಂದ ಗಾಣಿಗ ವಂದಿಸಿದರು.
ಸನ್ಮಾನ, ಪ್ರತಿಭಾ ಪುರಸ್ಕಾರ

ದೈವ ಪರಿಚಾರಕ ನಾರಾಯಣ ಗಾಣಿಗ ಕಾರ್ಕಡ, ಹೈನುಗಾರರಾದ ನಾಗರತ್ನ ಜನಾರ್ದನ ಗಾಣಿಗ ಮಾಬುಕಳ, ರಾಜೇಶ ಗಾಣಿಗ ಹಾಗೂ ರೋಟರಿ ಕೋಟ ಸಿಟಿ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net