

ಹೆಬ್ರಿ: ಆಟಿ ತಿಂಗಳು ಎಂದರೆ ಕಷ್ಟದ ಸಮಯವಲ್ಲ, ಬದಲಾಗಿ ಅದು ನಮಗೆ ಆರೋಗ್ಯ, ತಾಳ್ಮೆ ಹಾಗೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡುವ ವಿಶೇಷ ಕಾಲಘಟ್ಟ ಎಂದು ಮೂಡುಬಿದಿರೆ ಆಳ್ವಾಸ್ ಡಿಗ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಚೈತ್ರ ವಿಶ್ವನಾಥ್ ಕುಲಾಲ್ ಹೇಳಿದರು.
ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್, ಗೌರವಾಧ್ಯಕ್ಷ ಭೋಜ ಕುಲಾಲ್ ಬೇಳಂಜೆ, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್ ಮಾತನಾಡಿದರು. ಬನಶಂಕರಿ ಉದ್ಯಮ ಸಂಸ್ಥೆಯ ಐತು ಕುಲಾಲ್ ಕನ್ಯಾನ ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆ, ನಿಯಮಗಳು ಹಾಗೂ ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳ ಮಾಹಿತಿ ನೀಡಿದರು.