ಫ್ರಿಡ್ಜ್ ಏಕಾಏಕಿ ಸ್ಫೋಟ

 ಸ್ಫೋಟದ ಪರಿಣಾಮ ಅಡುಗೆ ಕೋಣೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿರುವುದು.
ಸ್ಫೋಟದ ಪರಿಣಾಮ ಅಡುಗೆ ಕೋಣೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿರುವುದು.
Published on

ಕಡಬ: ಫಿಡ್ಜ್ ಏಕಾಏಕಿ ಸ್ಫೋಟಗೊಂಡು ಅಡುಗೆ ಕೋಣೆಯಲ್ಲಿದ್ದ ಪರಿಕರಗಳು ಸುಟ್ಟುಹೋಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಮಂಗಳವಾರ ನಡೆದಿದೆ.

ಆತೂರು ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಸಿದ್ದೀಕ್ ಅವರ ಪತ್ನಿ ಆರೀಫಾ ಮನೆಯೊಳಗಿದ್ದಾಗ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿ, ಹೊಗೆ ಆವರಿಸಿತ್ತು. ಆರೀಫಾ ಕೂಡಲೇ ಹಿಂಬಾಗಿಲಿನ ಮೂಲಕ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಫ್ರಿಡ್ಜ್ ಸುಟ್ಟು ಕರಕಲಾಗಿದೆ.
ಅಡುಗೆ ಕೋಣೆಯಲ್ಲಿದ್ದ ಇಲೆಕ್ಟ್ರಾನಿಕ್ ಉಪಕರಣಗಳು, ಪಾತ್ರೆ ಮತ್ತಿತರರ ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆರೀಫಾ ಅವರ ಮೂವರು ಮಕ್ಕಳು ಶಾಲೆಗೆ ಹೋಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಯುವಕರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net