ಶನಿವಾರ ರಾಷ್ಟ್ರೀಯ ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿಯೊಂದು ತಲೆ ಎತ್ತುತ್ತಿದ್ದಂತೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಮ್ಮ ಮೊಬೈಲ್‌ನಲ್ಲಿ ಗಮನಿಸಿದ ಪಿಡಿಒ ತಕ್ಷಣ ಅಂಗಡಿ ತೆರವುಗೊಳಿಸುವ ಕಾರ್ಯಚರಣೆ ನಡೆಸಿದರು. ಜನ ವಾಹನ ದಟ್ಟಣೆ ಹೆಚ್ಚುವ ಮೊದಲೇ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಂಗಡಿ ತೆರವುಗೊಳಿಸುವ ಕ್ರಮ ಕೈಗೊಂಡರು.