ಡಿವಿಜಿ ಕಗ್ಗದಲ್ಲಿದೆ ಜೀವನ ಮೌಲ್ಯಗಳ ಸಾರ

ಬಾರ್ಕೂರು ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಭಾಕರ್​ ಶೆಟ್ಟಿ ಕೊಂಡಳ್ಳಿ ಮಾತನಾಡಿದರು. ಪ್ರೊ. ಭಾಸ್ಕರ್​ ಶೆಟ್ಟಿ ಎಸ್​., ಶೈಲಜಾ, ಡಾ. ಪಲ್ಲವಿ ಎನ್​. ಇದ್ದರು.
ಬಾರ್ಕೂರು ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಭಾಕರ್​ ಶೆಟ್ಟಿ ಕೊಂಡಳ್ಳಿ ಮಾತನಾಡಿದರು. ಪ್ರೊ. ಭಾಸ್ಕರ್​ ಶೆಟ್ಟಿ ಎಸ್​., ಶೈಲಜಾ, ಡಾ. ಪಲ್ಲವಿ ಎನ್​. ಇದ್ದರು.
Published on

* ಪ್ರಭಾಕರ್​ ಶೆಟ್ಟಿ ಕೊಂಡಳ್ಳಿ ಅಭಿಪ್ರಾಯ

* ಬಾರ್ಕೂರು ಕಾಲೇಜಿನಲ್ಲಿ ಉಪನ್ಯಾಸ

ಉಡುಪಿ: ಡಿ.ವಿ. ಗುಂಡಪ್ಪ ಅವರ 'ಮಂಕುತಿಮ್ಮನ ಕಗ್ಗ'ವು ಪದ್ಯ ರೂಪದಲ್ಲಿರುವ ಪುಸ್ತಕವಾಗಿದೆ. ಇದು ಕನ್ನಡದ ಭಗವದ್ಗೀತೆ ಎಂದೂ ಜನಪ್ರಿಯವಾಗಿದೆ. ಅವರು ಬರೆದ ಕಗ್ಗಗಳಲ್ಲಿ ಜೀವನದ ವಿವಿಧ ಆಯಾಮ, ರೀತಿ-ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಘಟನೆಗಳನ್ನೂ ಉಲ್ಲೇಖಿಸಿ ಜೀವನದ ಮೌಲ್ಯ ಸಾರಿದ್ದಾರೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಪ್ರಭಾಕರ್​ ಶೆಟ್ಟಿ ಕೊಂಡಳ್ಳಿ ತಿಳಿಸಿದರು.
ಬಾರ್ಕೂರಿನಲ್ಲಿರುವ ಶ್ರೀಮತಿ ರುಕ್ಮಿಣಿ ಶೆಟ್ತಿ ಸ್ಮಾರಕ ನ್ಯಾಷನಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಕಾರದಲ್ಲಿ ಆಯೋಜಿಸಿದ್ದ 'ಮಂಕುತಿಮ್ಮನ ಕಗ್ಗದ ಮೌಲ್ಯ ಹಾಗೂ ಶೈಕ್ಷಣಿಕ ಸಾಧನೆಗೆ ಕಗ್ಗ ಪ್ರೇರಣೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್​ ಶೆಟ್ಟಿ ಎಸ್​. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಶೈಲಜಾ, ಸಹಾಯಕ ಪ್ರಾಧ್ಯಾಪಕಿ ಡಾ. ಪಲ್ಲವಿ ಎನ್​. ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net