2024ರಲ್ಲಿ ದ.ಕ. ಜಿಲ್ಲಾಧಿಕಾರಿ ಆದೇಶದಂತೆ ಜಿಲ್ಲೆ ಶಿಥಿಲಗೊಂಡಿದೆ ಎನ್ನಲಾದ ಪರಾರಿ-ಉಳಾಯಿಬೆಟ್ಟು, ಅಡ್ಡೂರು-ಪೊಳಲಿ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪೊಳಲಿ ಸೇತುವೆಯಲ್ಲಿ ಒಂದಷ್ಟು ಸಮಯ ಪ್ಯಾಚ್‌ವರ್ಕ್ ಕಾಮಗಾರಿ ನಡೆದ ಬಳಿಕ ಸೇತುವೆ ಮುಕ್ತಗೊಂಡಿದ್ದರೆ, ಉಳಾಯಿಬೆಟ್ಟು-ಪರಾರಿ ಕಿರು ಸೇತುವೆಯಲ್ಲಿ ಯಾವುದೇ ಕಾಮಗಾರಿ ನಡೆಯದೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇದಾದ ಕೆಲವು ಸಮಯದ ಮೇಲೆ ಇಲ್ಲಿ ಲೋಕೋಪಯೋಗಿ ಇಲಾಖೆ, ಭಂಡಾರ್ಕರ್ ಕನ್‌ಸ್ಟ್ರಕ್ಷನ್ ಕಂಪನಿ ಮೂಲಕ ಹೊಸ ಕಿರುಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿತ್ತು.