ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಅಶೋಕ್ ಮೂಲೆಮಜಲು ಅವರಿಗೆ ಪುಸ್ತಕಗಳ ಮೇಲೆ ವಿಶೇಷ ಆಸಕ್ತಿ ಬೆಳೆಯಿತು. ಕಥೆ, ಕಾದಂಬರಿ, ಸಾಮಾನ್ಯ ಜ್ಞಾನ, ಸಾಹಿತ್ಯ, ಇತಿಹಾಸ, ಧರ್ಮ, ರಾಜಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿತು. ಓದಿದ ಪುಸ್ತಕಗಳನ್ನು ಸಂರಕ್ಷಿಸುವ ಹವ್ಯಾಸದಿಂದ ಗ್ರಂಥಾಲಯ ನಿರ್ಮಾಣವಾಯಿತು.