

ಅಕ್ರಮ ಸಾಗುವಳಿದಾರರಿಗೆ ಅರಣ್ಯ ಇಲಾಖೆಯ ಸಮಸ್ಯೆಯಿಂದಾಗಿ ಹಲವು ವರ್ಷಗಳಿಂದ ಹಕ್ಕುಪತ್ರ ದೊರೆಯದೆ ಸಮಸ್ಯೆಯಾಗಿತ್ತು. ಇದೀಗ ಹಲವು ಹೋರಾಟದ ಬಳಿಕ ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ. ಇದರಿಂದ ನೂರಾರು ಮಂದಿಗೆ ಸಹಾಯವಾಗಲಿದೆ.
ಸರ್ಕಾರ ಮತ್ತು ಜಿಲ್ಲಾಧಿಕಾರಿ ನಿರ್ದೇಶನದಂತೆ ಜಂಟಿ ಸರ್ವೇ ನಡೆಯುತ್ತಿದೆ. ನಾಡ್ಪಾಲಿನ ಬಳಿಕ ವರಂಗ, ಶಿವಪುರ, ಅಂಡಾರು ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಜಂಟಿ ಸರ್ವೇ ನಡೆಯಲಿದೆ. ಅರಣ್ಯ ಇಲಾಖೆಯ ಅನುಮತಿ ಸಿಕ್ಕಿದ ಬಳಿಕ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ.