ಸಂಪಾದನೆಯ ಒಂದಂಶ ಸಮಾಜ ಸೇವೆಗೆ ವಿನಿಯೋಗ

 ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಆಶ್ರಯದಲ್ಲಿ ಹೊರತಂದಿರುವ ಡಾ.ಪಿ.ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರದ ಸಚಿತ್ರ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಪ್ರಮೋದ್ ಭಟ್, ರವೀಂದ್ರ ಪೈ, ವಿದ್ಯಾ ಪೈ, ಎಸ್.ಎಸ್.ನಾಯಕ್ ಮೊದಲಾದವರಿದ್ದರು.
ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಆಶ್ರಯದಲ್ಲಿ ಹೊರತಂದಿರುವ ಡಾ.ಪಿ.ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರದ ಸಚಿತ್ರ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಪ್ರಮೋದ್ ಭಟ್, ರವೀಂದ್ರ ಪೈ, ವಿದ್ಯಾ ಪೈ, ಎಸ್.ಎಸ್.ನಾಯಕ್ ಮೊದಲಾದವರಿದ್ದರು.
Published on

ಬಂಟ್ವಾಳ: ಜೀವನದಲ್ಲಿ ನಾವು ಎಷ್ಟೇ ಸಂಪಾದನೆ ಮಾಡಿದರೂ ಒಂದಂಶ ಕುಟುಂಬಕ್ಕೆ ಮೀಸಲಿಟ್ಟು, ಉಳಿದದ್ದನ್ನು ಸಮಾಜಕ್ಕೆ ನೀಡುವ ಮನೋಭಾವ ಬೇಕು. ದುರ್ಬಲರು ಹಾಗೂ ಸಮಾಜದ ಶ್ರೇಯಸ್ಸಿಗೆ ದುಡಿದಾಗ ಮಾತ್ರ ಜೀವನದಲ್ಲಿ ಸಾಕ್ಷಾತ್ಕಾರ ಪಡೆಯಲು ಸಾಧ್ಯ ಎಂದು ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ.ಲಿ. ಅಧ್ಯಕ್ಷ ಡಾ.ಪಿ.ದಯಾನಂದ ಪೈ ಹೇಳಿದರು.

ಪಾಣೆಮಂಗಳೂರು ಶ್ರೀ ವೀರವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಜಿ.ಎಸ್.ಬಿ. ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಆಶ್ರಯದಲ್ಲಿ ಹೊರತಂದಿರುವ ಡಾ.ಪಿ.ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರದ ಸಚಿತ್ರ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೆಕ್ಕಪರಿಶೋಧಕ ಸಿಎ ಎಸ್.ಎಸ್.ನಾಯಕ್, ಇಸ್ಕಾನ್‌ನ ಗುಣಕರ ದಾಸಸ್ವಾಮಿ, ಪುಸ್ತಕದ ಸಂಪಾದಕಿ ಪ್ರಜ್ವಲಾ ಶೆಣೈ, ಡಾ.ಅನ್ನಪೂರ್ಣ ಕಾಮತ್, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ, ಕಾರ್ಯಕ್ರಮದ ವ್ಯವಸ್ಥಾ ಪ್ರಮುಖರಾದ ವಿಜಯ್ ಕುಮಾರ್ ಶೆಣೈ, ವೆಂಕಟ್ರಾಯ ಕಾಮತ್ ಉಪಸ್ಥಿತರಿದ್ದರು.

ಪಾಣೆಮಂಗಳೂರು ಎಜುಕೇಶನ್ ಸೊಸೈಟಿ ಅಧ್ಯಕ್ಷ ಎನ್.ನರೇಂದ್ರನಾಥ ಕುಡ್ವ ಸ್ವಾಗತಿಸಿದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು. ಸಂಚಾಲಕ ಆರ್.ವಿವೇಕಾನಂದ ಶೆಣೈ ಪ್ರಸ್ತಾವಿಸಿದರು. ಶ್ರೀ ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವರ ದಿವ್ಯ ಸಾನ್ನಿಧ್ಯದಲ್ಲಿ ಡಾ.ಪಿ.ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ ಸಚಿತ್ರ ಸಂಚಿಕೆಯ ಶುಭ ಅನಾವರಣ ನಡೆಯಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪುಸ್ತಕದ ಲೋಕಾರ್ಪಣೆ ನೆರವೇರಿತು.

ಸಾಧನೆಗೆ ವಯಸ್ಸಿನ ಇತಿ ಮಿತಿ ಇಲ್ಲ. ವಯಸ್ಸು ಅನ್ನುವುದು ಸಾಮಾನ್ಯ ನಿಯಮ. ಆದರೆ ವಯಸ್ಸಿನ ಬಗೆಗಿನ ಭಾವನೆ ತೊರೆದು ದುಡಿಯುವ ಮನೋಸ್ಥಿತಿ ಬೇಕು, ದಾನ ಎಂಬುವುದು ಕೇವಲ ಹಣ ಮಾತ್ರವಲ್ಲ. ಸೇವೆ ಸಹಿತ ವಿವಿಧ ಆಯಾಮಗಳಲ್ಲಿ ಸಮಾಜದ ಸೇವೆ ಮಾಡಲು ಅವಕಾಶ ಇದೆ. ಮನುಷ್ಯ ಜನ್ಮ ಒಮ್ಮೆ ನಮಗೆ ಸಿಕ್ಕಿರುವ ಸೌಭಾಗ್ಯ ಮತ್ತೆ ಸಿಗಲಾರದು. ಹಾಗಾಗಿ ಇತರರ ಒಳಿತಿಗಾಗಿ ಹಾಗೂ ಸಂತೋಷಕ್ಕಾಗಿ ನಾವು ಸೇವೆ ಮಾಡುವ ಮನೋಭೂಮಿಕೆ ಬೆಳೆಸಬೇಕಿದೆ.

— ಡಾ.ಪಿ.ದಯಾನಂದ ಪೈ, ಅಧ್ಯಕ್ಷ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ.ಲಿ.

ದೇವರ ಮೇಲಿನ ಭಕ್ತಿ, ಎಲ್ಲರ ಜತೆಗೆ ಪ್ರೀತಿ ಹಾಗೂ ಸರ್ವರನ್ನೂ ಗೌರವದಿಂದ ನೋಡುವ ಸರಳ ವ್ಯಕ್ತಿ ಡಾ.ದಯಾನಂದ ಪೈ ಸಮಾಜದ ಶಕ್ತಿ. ದೇವರು ಹಲವರಿಗೆ ಶ್ರೀಮಂತಿಕೆ ಕೊಟ್ಟಿರಬಹುದು. ಆದರೆ ಹೃದಯ ಶ್ರೀಮಂತಿಕೆ ಇರುವವರು ಕಡಿಮೆ. ಹೃದಯ ಶ್ರೀಮಂತರಾಗಿ ಸಮಾಜದ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ.

— ಪ್ರದೀಪ್ ಜಿ.ಪೈ., ಆಡಳಿತ ನಿರ್ದೇಶಕ ಹಾಂಗ್ಯೋ ಐಸ್ ಕ್ರೀಂ ಪ್ರೈ.ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net