

ದಶಕದಿಂದ ನದಿ ಉಳಿಸಲು ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿ ಅತ್ಯಂತ ಕಳವಳಕಾರಿ ಎನಿಸಿದೆ. ನದಿ ಉಳಿಸುವ ನಿಟ್ಟಿನಲ್ಲಿ ಆಂದೋಲನ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ಕುಂದಾಪುರ ನಡುವೆ ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ, ನದಿಯ ಹೂಳೆತ್ತುವಿಕೆ, ಪ್ರಕೃತಿದತ್ತ ಕುದ್ರುಗಳ ರಕ್ಷಣೆ, ಹೂಳು ಮೇಲಕ್ಕೆತ್ತಿ ನೀರು ನಿಲ್ಲಿಸುವಿಕೆ, ಟೂರಿಸಂ ಅಭಿವೃದ್ಧಿ ಸಹಿತ ಮತ್ತು ಹಲವು ಬೇಡಿಕೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೂ ಈವರೆಗೆ ಯಾವುದೇ ಪ್ರಗತಿಯಿಲ್ಲ.