ಕಡಬ: ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಂಡು ಸಮರ್ಥವಾಗಿ ಜೀವನ ನಿರ್ವಹಣೆ ಮಾಡಲು ಸಂಜೀವಿನಿ ಒಕ್ಕೂಟ ಮಹತ್ತರ ಪಾತ್ರ ವಹಿಸುತ್ತದೆ. ನಂದಗೋಕುಲ ಒಕ್ಕೂಟ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಸ್ವಚ್ಛತೆ, ಆರೋಗ್ಯ ಇನ್ನಿತರ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಬಿಳಿನೆಲೆ ಗ್ರಾಮ ಪಂಚಾಯಿತಿ ಅಧಿಕಾರಿ ಚಂದ್ರಾವತಿ ರೈ ಹೇಳಿದರು.
ಬಿಳಿನೆಲೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಬಿಳಿನೆಲೆ ನಂದಗೋಕುಲ ಸಂಜೀವಿನಿ ಒಕ್ಕೂಟ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಮಹಿಳಾ ಸ್ವಾಂತನ ಕೇಂದ್ರ ಆಪ್ತ ಸಮಾಲೋಚಕಿ ನಿಶಾಪ್ರಿಯಾ ಮಾತನಾಡಿದರು. ಕಡಬ ವಲಯ ಮೇಲ್ವಿಚಾರಕಿ ನಳಿನಾಕ್ಷಿ, ಕಡಬ ತಾಲೂಕು ಸಂಪನ್ಮೂಲ ವ್ಯಕ್ತಿ ಧನ್ಯಶ್ರೀ, ನಂದಗೋಕುಲ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಉಮಾವತಿ ಮಾತನಾಡಿದರು.
ಬಿಳಿನೆಲೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಹನ ಚಾಲಕಿರಾದ ರೂಪಾ ಒಗ್ಗು, ಜಲಜಾಕ್ಷಿ ಕಳಿಗೆ ಹಾಗೂ ಸಿಬ್ಬಂದಿ ಹೇಮಲತಾ, ಪಾರ್ವತಿ ಸೂಡ್ಲು ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಂದಗೋಕುಲ ಒಕ್ಕೂಟ ಸಂಪನ್ಮೂಲ ವ್ಯಕ್ತಿಗಳಾದ ಭವಾನಿ ಮದಪರ್ಲ, ರಂಜಿತಾ ಚಿದ್ಗಲ್, ಕೃಷಿಸಖಿ ಸಾವಿತ್ರಿ ಸಣ್ಣಾರ, ಪಶುಸಖಿ ದಿವ್ಯಾ ಬಾಲಕೃಷ್ಣ ಗೌಡ, ನಂದಗೋಕುಲ ಒಕ್ಕೂಟದ ಪದಾಧಿಕಾರಿಗಳಾದ ಚಂದ್ರಕಲಾ ಎರ್ಕ, ಶೀಲಾವತಿ ಸಣ್ಣಾರ, ಸುರೇಖಾ ಪರ್ಲ, ಪ್ರಮಿಳಾ, ತಾರಾ, ಜ್ಯೋತಿ ಬೈಲು ಉಪಸ್ಥಿತರಿದ್ದರು.
ಕಾರ್ಯದರ್ಶಿ ಯಮುನಾ ಸೂಡ್ಲು ವರದಿ ವಾಚಿಸಿದರು. ಲೆಕ್ಕ ಪರಿಶೋಧನಾ ವರದಿಯನ್ನು ರಮ್ಯಾ ಮಂಡಿಸಿದರು. ಕಾವ್ಯಾ ವಾಲ್ತಾಜೆ ವಂದಿಸಿದರು. ಶಾಲಿನಿ ಪರ್ಲ, ಸರೋಜಿನಿ ಜಯಪ್ರಕಾಶ್ ನಿರೂಪಿಸಿದರು.