ಕೆಜೆಯು ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಜಿಲ್ಲಾಧ್ಯಕ್ಷ ಈಶ್ವರ ವಾರಣಾಶಿ, ತಾಲೂಕು ಘಟಕ ಗೌರವಾಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿ ಅನಿಲ್ ಕಳಂಜ, ಪ್ರೆಸ್‌ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ಚೈತ್ರಾ ವಿನಯ್ ಪ್ರಾರ್ಥಿಸಿದರು. ಜಯಶ್ರೀ ಕೊಯಿಂಗೋಡಿ ಸ್ವಾಗತಿಸಿದರು. ಶಿವಪ್ರಸಾದ್ ಆಲೆಟ್ಟಿ ನಿರೂಪಿಸಿದರು. ಬಳಿಕ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಅವರಿಂದ ಮಿಮಿಕ್ರಿ, ವಿವಿಧ ಆಟಿ ಸ್ಪರ್ಧೆ ನಡೆಯಿತು.