ಈ ವಿಚಾರ ತಿಳಿದು ಸಹಾಯ ಮಾಡಲೆಂದು ಸಮಾಜ ಸೇವಕ ವಿಶು ಶೆಟ್ಟಿ ಬಸ್ ನಿಲ್ದಾಣಕ್ಕೆ ಧಾವಿಸಿ, ಯುವತಿಯನ್ನು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸಹಾಯದಿಂದ ವಶಕ್ಕೆ ಪಡೆಯಲು ಪ್ರಯತ್ನಿಸಿದರು. ತನ್ನನ್ನು ಹಿಡಿಯುತ್ತಾರೆಂಬ ಕಾರಣಕ್ಕೆ ಯುವತಿ ತನ್ನ ಬ್ಯಾಗ್ನಿಂದ ಚಾಕು ತೆಗೆದು ವಿಶು ಶೆಟ್ಟಿ ಮೇಲೆ ಮುಗಿಬಿದ್ದಳು. ದಾಳಿ ನಡೆಸಿ ಚಾಕು ಬೀಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಆದರೂ ಜೀವದ ಹಂಗು ತೊರೆದು ಯುವತಿಯ ಕೈಯಲ್ಲಿದ್ದ ಚಾಕು ಕಸಿದುಕೊಳ್ಳುವಲ್ಲಿ ಸಫಲರಾದರು.