ಮಾದರಿಯಾಗಲಿ ಗ್ರಾಮೀಣ ಭಾಗದ ಸಾಹಿತ್ಯ ಸಮ್ಮೇಳನ

ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ಹೆಬ್ರಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶೇಡಿಮನೆ ಗೋಪಾಲ ಶೆಟ್ಟಿ ಅವರಿಗೆ ಆಮಂತ್ರಣ ನೀಡಿ ಗೌರವಿಸಲಾಯಿತು. ನೀಲಾವರ ಸುರೇಂದ್ರ ಅಡಿಗ, ಕೆ.ಮೋಹನದಾಸ್ ಹೆಗ್ಡೆ ಕುದ್ರುಬೀಡು, ಕೆ.ಸುಧಾಕರ ಶೆಟ್ಟಿ ಅರಸಮ್ಮಕಾನು, ಶಂಕರ ಪೂಜಾರಿ, ರಾಧಾಕೃಷ್ಣ ಕ್ರಮಧಾರಿ, ಸುಬ್ರಹ್ಮಣ್ಯ ಶೆಟ್ಟಿ, ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ ಉಪಸ್ಥಿತರಿದ್ದರು.

Published on
 ಆರ್ಡಿ: ಗ್ರಾಮೀಣ ಭಾಗದಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿನೊಂದಿಗೆ ಮಾದರಿಯಾಗಲಿದೆ. ಉತ್ತಮ ಸ್ಪಂದನೆ, ಸಹಕಾರ ನೀಡುತ್ತಿರುವುದು ಹಾಗೂ ಹುಟ್ಟೂರಿನ ಸಾಧಕರನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಳಿಸಿರುವುದು ಪ್ರಶಂಸನೀಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
 ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ಗಂಗಡಬೈಲು ಸುಬ್ರಾಯ ಬಾಯರಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕದ ವತಿಯಿಂದ ಮಾರ್ಚ್ 1ರಂದು ನಡೆಯಲಿರುವ ಹೆಬ್ರಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ನೀಡಿ ಬುಧವಾರ ಮಾತನಾಡಿದರು.
ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನದಾಸ್ ಹೆಗ್ಡೆ ಕುದ್ರುಬೀಡು, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ ಅರಸಮ್ಮಕಾನು, ಕಾರ್ಯಾಧ್ಯಕ್ಷ ಶಂಕರ ಪೂಜಾರಿ, ಸಂಚಾಲಕ ರಾಧಾಕೃಷ್ಣ ಕ್ರಮಧಾರಿ, ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಅನಂತ ತಂತ್ರಿ, ಶಿವರಾಮ ಶೆಟ್ಟಿ ಬೆಪ್ಡೆ, ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ ಮತ್ತಿತರರು ಉಪಸ್ಥಿತರಿದ್ದರು. 
ಶೇಡಿಮನೆ ಅರಸಮ್ಮಕಾನು ಸಾಂತನಮಕ್ಕಿ ಮೂಲಮನೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಶೇಡಿಮನೆ ಗೋಪಾಲ ಶೆಟ್ಟಿ ದಂಪತಿಯವರನ್ನು ಸನ್ಮಾನಿಸಿ, ಆಮಂತ್ರಣ ಪತ್ರಿಕೆ ನೀಡಲಾಯಿತು. 
ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಕೆ.ಶಿವಪುರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net