ಸಹನೆ, ಸಹಬಾಳ್ವೆಯಿಂದ ಮೌಲ್ಯಯುತ ಬದುಕು

 ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್.ವಿ. ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮದಲ್ಲಿ ಸವಿತಾ ಯು.ದೇವಾಡಿಗ ಮಾತನಾಡಿದರು. ಪ್ರಮುಖರಾದ ಕವಿತಾ ಎಂ.ಸಿ., ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್.ವಿ. ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮದಲ್ಲಿ ಸವಿತಾ ಯು.ದೇವಾಡಿಗ ಮಾತನಾಡಿದರು. ಪ್ರಮುಖರಾದ ಕವಿತಾ ಎಂ.ಸಿ., ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Published on

ಕುಂದಾಪುರ:

ವನ್ನು ಸ್ವೇಚ್ಛೆ ಎಂದುಕೊಳ್ಳುವುದು ತಪ್ಪು. ಇಂದಿನ ವಿದ್ಯಾರ್ಥಿಗಳು ಸಹನೆ, ಸಹಬಾಳ್ವೆ, ಗೌರವ ಮೊದಲಾದ ಮೌಲ್ಯಗಳ ಜತೆ ಬದುಕನ್ನು ಸಾಗಿಸಿದಾಗ ಸ್ವಾತಂತ್ರೃಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಗಂಗೊಳ್ಳಿಯ ನಿವೇದಿತಾ ಶಿಶು ಮಂದಿರದ ಸದಸ್ಯೆ ಸವಿತಾ ಯು.ದೇವಾಡಿಗ ಹೇಳಿದರು.

ಸ್ವಾತಂತ್ರ್ಯ ಮಹೋತ್ಸವ ಪೂರ್ವಭಾವಿಯಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್.ವಿ. ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ವರ್ಡ್ಸ್ ಆಫ್ ಇಂಡಿಪೆಂಡೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಆಯಿಷಾ ಮೆಹರೀನ್, ಅಜ್ರಾ ಅನ್ವರ್ ಆಲಿ, ಶಿವಾನಿ ಮತ್ತು ಪ್ರಾರ್ಥನಾ ಪೈ ಸ್ವಾತಂತ್ರೋತ್ಸವದ ಕುರಿತು ವಿಚಾರ ಹಂಚಿಕೊಂಡರು. ಮಾನ್ಯ, ಸಹನಾ ದಾಸ್, ದೀಪಾಲಿ ಮತ್ತು ಸಾನಿಕ ಎಸ್.ಪೂಜಾರಿ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿದರು.
ಎಸ್.ವಿ. ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್.ಗಂಗೊಳ್ಳಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಅದಿತಿ ಎಸ್.ಖಾರ್ವಿ ಸ್ವಾಗತಿಸಿದರು. ಅಭಿಜ್ಞಾ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ನವಮಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net