ಕಳೆದ ವರ್ಷ ತಿರುವೈಲು ಸರ್ಕಾರಿ ಶಾಲೆ ಅನತಿ ದೂರದಲ್ಲಿ ಕೆತ್ತಿಕಲ್ ಗುಡ್ಡ ಕುಸಿದಿತ್ತು. ಬಳಿಕ ಆ ಪ್ರದೇಶದ ಸುರಕ್ಷತೆಗಾಗಿ ಸಿಮೆಂಟ್ ಸಿಂಪಡಿಸಿ ನೀರಿನ ಒರತೆ ನಿಯಂತ್ರಿಸಲು ಉಕ್ಕಿನ ಕೊಳವೆ, ಬಲೆ ಹಾಸಲಾಗಿತ್ತು. ಗುಡ್ಡದ ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇನ್ನು ಯಾವುದೇ ಅನಾಹುತ ಸಂಭವಿಸದು ಎಂದು ಎನ್‌ಎಚ್ ಭರವಸೆ ನೀಡಿತ್ತು. ಇದಾದ ಕೆಲವೇ ದಿನಗಳಲ್ಲಿ ಸುರಿದ ಧಾರಾಕಾರ ಮಳೆಗೆ ಹೆದ್ದಾರಿಗೆ ಗುಡ್ಡದ ಮಣ್ಣು, ಬಂಡೆ ಉರುಳಿ ಬಿದ್ದು ಚತುಷ್ಪಥದಲ್ಲಿ ದ್ವಿಪಥ ನುಚ್ಚುನೂರಾಗಿತ್ತು.