ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನ

 ಆಳ್ವಾಸ್ ಕೇರಳೀಯಂ-2026 ಕಾರ್ಯಕ್ರಮದಲ್ಲಿ ಮಲಯಾಳಂ ನಟ ಬಿನು ಪಪ್ಪು, ಮೊಹಮ್ಮದ್ ಫಹಾದ್, ವಿವೇಕ್ ಆಳ್ವ, ಮುಸ್ತಫ, ಅಕ್ಷಯ ಜೈನ್, ನೌಷಧ್, ಫಾವಜ್ ಮತ್ತಿತರರು ಉಪಸ್ಥಿತರಿದ್ದರು.
ಆಳ್ವಾಸ್ ಕೇರಳೀಯಂ-2026 ಕಾರ್ಯಕ್ರಮದಲ್ಲಿ ಮಲಯಾಳಂ ನಟ ಬಿನು ಪಪ್ಪು, ಮೊಹಮ್ಮದ್ ಫಹಾದ್, ವಿವೇಕ್ ಆಳ್ವ, ಮುಸ್ತಫ, ಅಕ್ಷಯ ಜೈನ್, ನೌಷಧ್, ಫಾವಜ್ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಕಠಿಣ ಪರಿಶ್ರಮದ ಮೂಲಕ ಉನ್ನತ ಸ್ಥಾನಕ್ಕೇರಬೇಕು ಹಾಗೂ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು ಜವಾಬ್ದಾರಿಯುತ ಜೀವನ ನಡೆಸಬೇಕು ಎಂದು ಮಲಯಾಳಂ ನಟ, ನಿರ್ದೇಶಕ ಬಿನು ಪಪ್ಪು ಹೇಳಿದರು.
ಕೇರಳದ ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆ, ವೈವಿಧ್ಯಮಯ ಜೀವನಶೈಲಿಯನ್ನು ಕರ್ನಾಟಕದ ನೆಲದಲ್ಲಿ ಅನಾವರಣಗೊಳಿಸುವ ಆಳ್ವಾಸ್ ಕೇರಳೀಯಂ-2026 ಕಾರ್ಯಕ್ರಮ ಆಳ್ವಾಸ್ ವಿದ್ಯಾಸಂಸ್ಥೆಯ ಮುಂಡ್ರುದೆಗುತ್ತು ಕೆ.ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಗುರುವಾರ ನಡೆಯಿತು.

ಕೇರಳದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಕಥಕಳಿ, ಮೋಹಿನಿಯಾಟ್ಟಂ, ಮಾವೇಲಿ, ಪಂಚವಾದ್ಯ, ತಾಲಪೊಲಿ, ಪುಲಿಕಳಿ, ಚೆಂಡೆ, ಕಾವಡಿ, ಒಪ್ಪನ, ಕೋಲ್ಕಳಿ, ಕಲರಿ, ತೆಯ್ಯಂ, ಥಾಬೋಲಂ, ಗರುಡನ್, ಪೂರ್ಣ ತಿರುವಾತಿರ ಸೇರಿದಂತೆ ಹಲವು ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಮೆಗಾ ತಿರುವಾತ್ತಿರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಮೊಹಮ್ಮದ್ ಫಹಾದ್, ಆಳ್ವಾಸ್ ಸಂಸ್ಥೆ ಬೆಳವಣಿಗೆ ಹಾಗೂ ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿ ಮುಸ್ತಫ, ಪ್ರಮುಖರಾದ ಅಕ್ಷಯ ಜೈನ್, ನೌಷಧ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಫಾವಜ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಇದ್ದರು. ಕೆಝಿಯಾ ಮೇರಿ ಜಾರ್ಜ ಸ್ವಾಗತಿಸಿದರು. ಆರಂಟಾ ವಂದಿಸಿದರು. ಫೆನಿಲ್ಡಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net