ಭ್ರಾತೃತ್ವ , ಐಕ್ಯದ ಮನೋಜ್ಞ ಸಂದೇಶ

ಕುಂಬಳೆ ಪ್ರೆಸ್‌ಫೋರಂನಲ್ಲಿ ಓಣಂ ಕಾರ್ಯಕ್ರಮದಲ್ಲಿ ಅಶ್ರಫ್ ಕಾರ್ಲೆ ಮಾತನಾಡಿದರು. ಅಬ್ದುಲ್ಲ ಕುಂಬಳೆ, ಅಶ್ರಫ್ ಸ್ಕೈಲರ್ ಮೊದಲಾದವರಿದ್ದರು.
ಕುಂಬಳೆ ಪ್ರೆಸ್‌ಫೋರಂನಲ್ಲಿ ಓಣಂ ಕಾರ್ಯಕ್ರಮದಲ್ಲಿ ಅಶ್ರಫ್ ಕಾರ್ಲೆ ಮಾತನಾಡಿದರು. ಅಬ್ದುಲ್ಲ ಕುಂಬಳೆ, ಅಶ್ರಫ್ ಸ್ಕೈಲರ್ ಮೊದಲಾದವರಿದ್ದರು.
Published on

ಕುಂಬಳೆ: ಓಣಂ ಭ್ರಾತೃತ್ವ ಮತ್ತು ಐಕ್ಯದ ಸಂದೇಶ ನೀಡುವ ಹಬ್ಬ. ಇಂತಹ ಕೂಟಗಳು ಸಮುದಾಯದಲ್ಲಿ ಸ್ನೇಹ ಬಲಪಡಿಸುತ್ತವೆ ಎಂದು ಕಾಸರಗೋಡು ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಹೇಳಿದರು. ಕುಂಬಳೆ ಪ್ರೆಸ್ ಫೋರಂ ನೇತೃತ್ವದಲ್ಲಿ ‘ಮಾಧ್ಯಮ ಓಣಂ’ ಆಚರಣೆ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಸದಸ್ಯರ ಕುಟುಂಬಗಳ ಮಕ್ಕಳಿಗೆ ಸಂಗೀತ ಕುರ್ಚಿ, ಬಲೂನ್ ಒಡೆಯುವುದು ಮತ್ತು ಓಣಂ ಹಾಡು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರೆಸ್ ಫೋರಂ ಸದಸ್ಯರಿಗೆ ಓಣಂ ಉಡುಗೊರೆಗಳನ್ನು ಯುವ ಉದ್ಯಮಿ ಅಶ್ರಫ್ ಸ್ಕೈಲರ್ ವಿತರಿಸಿದರು.
ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಮುಖ್ಯ ಅತಿಥಿಯಾಗಿದ್ದರು. ಉಪಾಧ್ಯಕ್ಷ ಪುರುಷೋತ್ತಮ ಭಟ್, ಸದಸ್ಯರಾದ ಅಬ್ದುಲ್ ಲತೀಫ್ ಉಳುವಾರ್, ರಶೀದ್ ಬಂದ್ಯೋಡು, ಕೆ.ಎಂ.ಸತ್ತಾರ್, ಧನರಾಜ್ ಉಪ್ಪಳ, ತಾಹಿರ್ ಉಪ್ಪಳ, ಸುಬೈರ್ ಕುಕ್ಕಾರ್, ಝೈನುದ್ದೀನ್ ಅಡ್ಕ ಮತ್ತು ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳೆ ಮಾತನಾಡಿದರು. ಪ್ರೆಸ್‌ಫೋರಂ ಕಾರ್ಯದರ್ಶಿ ಐ.ಮುಹಮ್ಮದ್ ರಫೀಕ್ ಸ್ವಾಗತಿಸಿ, ಕೆ.ಎಂ.ಸತ್ತಾರ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net