ನಾವುಂದದಲ್ಲಿ ಅದ್ದೂರಿ ಗ್ರಾಮೋತ್ಸವ

 ನಾವುಂದ ಗ್ರಾಪಂ ನೇತೃತ್ವದಲ್ಲಿ ನಡೆದ ನಾವುಂದ ಗ್ರಾಮೋತ್ಸವವನ್ನು ಮೋಹನ ಪೂಜಾರಿ ಉದ್ಘಾಟಿಸಿದರು. ಮಹೇಂದ್ರ ಪೂಜಾರಿ, ಹಕ್ಕಾಡಿ ಜಗದೀಶ ಪೂಜಾರಿ ಇತರರಿದ್ದರು.
ನಾವುಂದ ಗ್ರಾಪಂ ನೇತೃತ್ವದಲ್ಲಿ ನಡೆದ ನಾವುಂದ ಗ್ರಾಮೋತ್ಸವವನ್ನು ಮೋಹನ ಪೂಜಾರಿ ಉದ್ಘಾಟಿಸಿದರು. ಮಹೇಂದ್ರ ಪೂಜಾರಿ, ಹಕ್ಕಾಡಿ ಜಗದೀಶ ಪೂಜಾರಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ನಾವುಂದ ಗ್ರಾಪಂ ನೇತೃತ್ವದಲ್ಲಿ ಸಂಗಮ ಸಂಜೀವಿನಿ ಒಕ್ಕೂಟ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ, ಮೆಸ್ಕಾಂ, ಅಂಚೆ ಮತ್ತು ತಂತಿ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಾವುಂದ ಗ್ರಾಮೋತ್ಸವ ವೈಭದಿಂದ ಜರುಗಿತು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ ಸಮಾರಂಭ ಉದ್ಘಾಟಿಸಿದರು. ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ನಾವುಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಕ್ಕಾಡಿ ಜಗದೀಶ ಪೂಜಾರಿ, ಅರೆಹೊಳೆ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ ಶ್ಯಾನುಭೋಗ್, ನಾವುಂದ ಮಸ್ಕಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ನಾವುಂದ ಜಮಾಅತ್ ಉಪಾಧ್ಯಕ್ಷ ಎನ್.ಸಿ. ಅಬ್ದುಲ್ ಖಾದರ್, ಸಂಗಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ, ಬೈಂದೂರು ಉತ್ಸವ ಸಮಿತಿ ಉಪಾಧ್ಯಕ್ಷೆ ಅನಿತಾ ಆರ್.ಕೆ., ಪಂಚಾಯಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕ್ರೀಡಾಕೂಟ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಾವುಂದ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪಿಡಿಒ ಹರೀಶ ಜಿ. ಮೊಗವೀರ ಸ್ವಾಗತಿಸಿದರು. ಶಂಕರ ಆಚಾರ್ಯ ವಂದಿಸಿದರು. ಸುನೀಲ್ ಕುಮಾರ್ ಶೆಟ್ಟಿ ನಿರೂಪಿಸಿದರು.

ಗಣ್ಯರಿಗೆ ಗೌರವಾರ್ಪಣೆ

ಕೃಷಿಕ ವೆಂಕಟರಮಣ ಗಾಣಿಗ, ಮೀನುಗಾರ ನಾರಾಯಣ ಖಾರ್ವಿ, ಹೈನುಗಾರಿಕಾ ಕ್ಷೇತ್ರದ ಸಾಧಕರಾದ ರತ್ನಾ ದೇವಾಡಿಗ, ತೌಫೀಕ್ ಅಬ್ದಲ್ ಸಾಹೇಬ್, ಗ್ರಾಪಂನ ಘನತ್ಯಾಜ್ಯ ನಿರ್ವಹಣೆಯ ಮೇಲ್ವಿಚಾರಕಿ ಶ್ಯಾಮಲಾ ಮೊಗವೀರ, ಚಾಲಕ ರಾಘವೇಂದ್ರ ದೇವಾಡಿಗ, ಸಹಾಯಕರಾದ ಸಾಕು, ಲಕ್ಷ್ಮೀ, ದೀಪಾ, ಸಾಹಸ್ ಎನ್‌ಜಿಓ ಸಂಸ್ಥೆಯ ಸರೋಜಾ, ಅರೆಹೊಳೆ ಅಂಗನಾಡಿ ಕೇಂದ್ರದ ಕಾರ್ಯಕರ್ತೆ ಶ್ಯಾಮಲಾ ಅವರನ್ನು ಸನ್ಮಾನಿಸಲಾಯಿತು.
ಬಿವೈಎನ್-ಜ.18-3-
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net