ಬೈಂದೂರು: ಜಡ್ಕಲ್ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ಬಿಸಿನಪಾರೆ ಸಂಘ ಸ್ಥಾನದ ವಠಾರದಲ್ಲಿ ನೆರವೇರಿತು. ಸಂಘದ ಹಿರಿಯರಾದ ತಂಗಪ್ಪನ್ ಗೋಪೂಜೆ ನೆರವೇರಿಸಿದರು. ನಂತರ ಹುಲಿಪಾರೆ ಮರ್ಲಚಿಕ್ಕು ಹೈಗುಳಿ ದೈವಸ್ಥಾನದಿಂದ ಹೊರಟ ಶೋಭಾಯಾತ್ರೆಯಲ್ಲಿ ಹಿಂದೂಗಳು ಪಾಲ್ಗೊಂಡರು. ಭಾರತಮಾತೆಯ ಟ್ಯಾಬ್ಲೊ, ಸ್ಥಳೀಯ ಭಜನಾತಂಡ, ಚಂಡೆ ವಾದನ ತಂಡಗಳೊಂದಿಗೆ ಊರಿನ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಜೈಕಾರ ಹಾಕುತ್ತ ಹೆಜ್ಜೆ ಹಾಕಿದರು.