ಬಂಗಾಡಿ-ಕೊಲ್ಲಿ ಕಂಬಳಕ್ಕೆ ಚಾಲನೆ ಅದ್ದೂರಿ ಚಾಲನೆ

ಬಂಗಾಡಿ ಕೊಲ್ಲಿ ಕಂಬಳ ಕಾರ್ಯಕ್ರಮವನ್ನಜು ದಾಸಪ್ಪ ಗೌಡ ಕಾಂಜಾನು ಉದ್ಘಾಟಿಸಿದರು. ಪ್ರಮುಖರಾದ ಶರತ್‌ಕೃಷ್ಣ ಪಡುವೆಟ್ನಾಯ, ಮುಕುಂದ ಸುವರ್ಣ, ಡಾ.ಎಂ.ಎಂ ದಯಾಕರ್, ರವಿ ಚಕ್ಕಿತ್ತಾಯ ಇತರರಿದ್ದರು.
ಬಂಗಾಡಿ ಕೊಲ್ಲಿ ಕಂಬಳ ಕಾರ್ಯಕ್ರಮವನ್ನಜು ದಾಸಪ್ಪ ಗೌಡ ಕಾಂಜಾನು ಉದ್ಘಾಟಿಸಿದರು. ಪ್ರಮುಖರಾದ ಶರತ್‌ಕೃಷ್ಣ ಪಡುವೆಟ್ನಾಯ, ಮುಕುಂದ ಸುವರ್ಣ, ಡಾ.ಎಂ.ಎಂ ದಯಾಕರ್, ರವಿ ಚಕ್ಕಿತ್ತಾಯ ಇತರರಿದ್ದರು.
Published on
ಬೆಳ್ತಂಗಡಿ : ಬಂಗಾಡಿ ಕೊಲ್ಲಿ ಸೂರ್ಯಚಂದ್ರ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ, ರಾಜ್ಯ ಕಂಬಳ ಅಸೋಸಿಯೇಶನ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ವಿವಿಧ ಸಂಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಂಗಾಡಿ ಕೊಲ್ಲಿ ನೇತ್ರಾವತಿ ನದಿ ಕಿನಾರೆಯ ಕಂಬಳ ಕ್ರೀಡಾಂಗಣದಲ್ಲಿ ಆರಂಭಗೊಂಡ 28ನೇ ವರ್ಷದ ಹೊನಲು ಬೆಳಕಿನ ಬಯಲು ಕಂಬಳಕ್ಕೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು.
ಧಾರ್ಮಿಕ ಪರಿಷತ್ ವಾಜಿ ಸದಸ್ಯ ಮುಕುಂದ ಸುವರ್ಣ, ದಂತ ವೈದ್ಯ ಡಾ.ಎಂ.ಎಂ ದಯಾಕರ್ ಶುಭ ಹಾರೈಸಿದರು. ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕಾಂಜಾನು ಅಧ್ಯಕ್ಷತೆ ವಹಿಸಿದ್ದರು.
ಉಜಿರೆಯ ಹಿರಿಯ ಉದ್ಯಮಿ ರವಿ ಚಕ್ಕಿತ್ತಾಯ, ಮಿತ್ತಬಾಗಿಲು ಗ್ರಾ.ಪಂ ವಾಜಿ ಸದಸ್ಯ ಕೃಷ್ಣಪ್ಪ ಪೂಜಾರಿ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಜೆ ಮುಂಡಾಜೆ, ಕಾಜೂರು ಆಡಳಿತ ಮಂಡಳಿ ಹಿರಿಯ ಪದಾಧಿಕಾರಿ ಬದ್ರುದ್ದೀನ್ ಕಾಜೂರು, ವ್ನಿೇಶ್ ಪ್ರಭು ಆಲಂದಡ್ಕ, ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕೊಕ್ಕರ್ಣೆ, ಪ್ರಶಾಂತ್ ಕೆ ಎಸ್, ಉಪಾಧ್ಯಕ್ಷ ಸೂರಜ್ ವಳಂಬ್ರ, ಪ್ರಕಾಶ್ ಅಜೆಕಾರು, ಕಂಬಳ ಸಮಿತಿ ಉಪಾಧ್ಯಕ್ಷರದ ಸೀತಾರಾಮ ಹಾರ್ತಾಜೆ, ತುಂಗಪ್ಪ ಪೂಜಾರಿ ಕಾಜೂರು, ವಿನಯಚಂದ್ರ ಪಡೆಂಕಲ್ಲು, ಹಸೈನಾರ್ ಬಾವಲಿಬನ, ಕಿಶೋರ್ ಹೂರ್ಜೆ, ಕಾರ್ಯದರ್ಶಿಗಳಾದ ಭರತ್ ಕುವಾರ್ ಬಂಗಾಡಿ, ಆನಂದ ಗೌಡ, ಮಧುಕರ ಸುವರ್ಣ, ಕೋಶಾಧಿಕಾರಿ ಖಾಸಿಂ, ಯಶೋದರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ಕುಳೆಂಜಿರೋಡಿ, ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶೋರ್ ಕುವಾರ್ ವಳಂಬ್ರ ಸ್ವಾಗತಿಸಿದರು. ವಿನಯಚಂದ್ರ ಸೇನೆರೆಬೊಟ್ಟು ವಂದಿಸಿದರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿಸಿದರು.

ತುಳುನಾಡಿನ ಸಂಸ್ಕೃತಿ ಮೆರೆಸುವ ಕ್ರೀಡೆ

ಕಂಬಳ ತುಳುನಾಡಿನ ಜಾನಪದ ಕ್ರೀಡೆ, ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರ, ಸೌಹಾರ್ದ ಸಂತೋಷದಿಂದ ಆಚರಿಸಿಕೊಂಡು ಅದನ್ನು ಯುವಜನತೆಗೆ, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಮುಂದೆ ಹುಟ್ಟುವ ಪೀಳಿಗೆಗೆ ವರ್ಗಾಯಿಸುವ ಕೆಲಸ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಬಂಗಾಡಿ-ಕೊಲ್ಲಿ ಸೂರ್ಯಚಂದ್ರ ಜೋಡುಕರೆ ಕಂಬಳ ಸಮಿತಿ ವತಿಯಿಂದ ನಡೆದ ಕಂಬಳ ಕೂಟದಲ್ಲಿ ಮಾತನಾಡಿದರು. ಯುವ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಅಭಿನಂದನ್ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪುಷ್ಪರಾಜ ಶೆಟ್ಟಿ, ಪದಾಧಿಕಾರಿಗಳು ಸ್ಪೀಕರ್ ಅವರನ್ನು ಗೌರವಿಸಿದರು. ಕೊಲ್ಲಿ ದುರ್ಗಾ ದೇವಿ ಸನ್ನಿಧಾನದಿಂದ ಕೋಣಗಳು ಹಾಗೂ ಅತಿಥಿಗಳ ಒಡಗೂಡಿ ಮೆರವಣಿಗೆ ನಡೆಯಿತು. ಬೆಳಗ್ಗೆ ಸಂಪ್ರದಾಯಬದ್ಧವಾಗಿ ಕರೆ ಪೂಜೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net