

ಕುಂದಾಪುರ: ಕೊಟೇಶ್ವರದಿಂದ ಹಾಲಾಡಿ ಕಡೆಗೆ ಹೋಗುವ ರಸ್ತೆಯಲ್ಲಿ ಕೋಟೇಶ್ವರ ಗ್ರಾಮದ ಶಾಂತದುರ್ಗ ಸ್ಟೋರ್ ಬಳಿ ಅದೇ ಗ್ರಾಮದ ಮಧುಕರ್ ಶೇರಿಗಾರ್ ಎಂಬುವರು ರಸ್ತೆ ದಾಟುವಾಗ ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.
ಮಧುಕರ್ ಗಾಯಗೊಂಡಿದ್ದು, ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.