ಧಾರ್ಮಿಕ ಚಿಂತಕ ಬನರಿ ನಾರಾಯಣ ಭಟ್ಟ ಅವರ ಅಭಿನಂದನ ಗ್ರಂಥ ‘ಸುಧಾಂಶು’ ಕೃತಿಯನ್ನು ಎಡನೀರು ಶ್ರೀ ಬಿಡುಗಡೆಗೊಳಿಸಿದರು. ಪ್ರಮುಖರಾದ ಶಿವಶಂಕರ ಭಟ್ಟ ಕಿಳಿಂಗಾರು, ಕಜಂಪಾಡಿ ರಾಮಕೃಷ್ಣ ಭಟ್ಟ, ಈಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದರು.
Published on:
Copied
Follow Us
ಕಾಸರಗೋಡು: ಸಮಾಜದಲ್ಲಿ ಒಬ್ಬ ಶಿಕ್ಷಕ, ತನ್ನ ಬೋಧನಾ ಶೈಲಿ ಹಾಗೂ ವ್ಯಕ್ತಿತ್ವದ ಮೂಲಕ ಆದರ್ಶಪ್ರಾಯನಾಗಿ ಬಾಳಲು ಸಾಧ್ಯ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಿವೃತ್ತ ಶಿಕ್ಷಕ, ಧಾರ್ಮಿಕ ಚಿಂತಕ ಬನರಿ ನಾರಾಯಣ ಭಟ್ಟ ಅವರ ಅಭಿನಂದನಾ ಗ್ರಂಥ ‘ಸುಧಾಂಶು’ ಲೋಕಾರ್ಪಣೆಯ ‘ಬನಾಯಾನ’ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಮ್ಮದಾಲಿ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಬನರಿ ನಾರಾಯಣ ಭಟ್-ರಾಜಲಕ್ಷ್ಮೀ ದಂಪತಿಯನ್ನು ಗೌರವಿಸಲಾಯಿತು.
ಪ್ರಮುಖರಾದ ಶಿವಶಂಕರ ಭಟ್ಟ ಕಿಳಿಂಗಾರು, ನಿವೃತ್ತ ಮುಖ್ಯಶಿಕ್ಷಕ ಕಜಂಪಾಡಿ ರಾಮಕೃಷ್ಣ ಭಟ್ಟ, ನಿವೃತ್ತ ಶಿಕ್ಷಕ ಈಶ್ವರ ಭಟ್, ಕಾಸರಗೋಡಿನ ಖಾಸಗಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಯದೇವ ಕಂಗಿಲ, ಪೆರಡಾಲ ದೇವಳ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯಶಿಕ್ಷಕ ರಾಜೇಂದ್ರ ಬಜಕೂಡ್ಲು ಗ್ರಂಥಾವಲೋಕನ ಮಾಡಿದರು. ಬಿಡುಗಡೆಗೊಂಡ 500 ಪುಟಗಳ ಗ್ರಂಥದ ಮೊದಲ ಪ್ರತಿಯನ್ನು ಡಾ.ಮಹಮ್ಮದಾಲಿ ಪೆರ್ಲ ಅವರಿಗೆ ಹಸ್ತಾಂತರಿಸುವ ಮೂಲಕ ಬನರಿ ನಾರಾಯಣ ಭಟ್ಟರು ಗ್ರಂಥ ಸಮಾಜಕ್ಕೆ ಸಮರ್ಪಿಸಿದರು. ಬಳಿಕ ಗ್ರಂಥಕ್ಕೆ ಲೇಖನ ಬರೆದ ಲೇಖಕರಿಗೆ ಹಾಗೂ ಚಿತ್ರ ಬರೆದವರಿಗೆ, ಕವಿಗಳಿಗೆ ಕೃತಿ ವಿತರಿಸಲಾಯಿತು.
ಗ್ರಂಥದ ಪ್ರಕಾಶಕ ವಿನಯ್ ಭಟ್ ಸ್ವಾಗತಿಸಿದರು. ಉದಯ ಕೃಷ್ಣ ಜಿ. ನಿರೂಪಿಸಿದರು. ಇಂಚರಾ ಬನರಿ ಪ್ರಾರ್ಥಿಸಿದರು. ಶ್ರೀಯಾ ಬನರಿ ವಂದಿಸಿದರು.