ಕಠಿಣ ಪರಿಶ್ರಮದಿಂದ ಉತ್ತಮ ಬದುಕು

 ಶ್ರೀದುರ್ಗಾ ಸಂಘಟನೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಯಕುಮಾರ್ ಮಾತನಾಡಿದರು. ಐತ್ತು ನಾಯ್ಕ, ಗಣೇಶ್ ಕುಮಾರ್ ಖಂಡಿಗೆ, ಉಷಾ ಕುಮಾರಿ ಮೊದಲಾದವರಿದ್ದರು.
ಶ್ರೀದುರ್ಗಾ ಸಂಘಟನೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಜಯಕುಮಾರ್ ಮಾತನಾಡಿದರು. ಐತ್ತು ನಾಯ್ಕ, ಗಣೇಶ್ ಕುಮಾರ್ ಖಂಡಿಗೆ, ಉಷಾ ಕುಮಾರಿ ಮೊದಲಾದವರಿದ್ದರು.
Published on
ಕಾಸರಗೋಡು: ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗದು. ಕಠಿಣ ಪರಿಶ್ರಮ ನಮ್ಮ ಬದುಕನ್ನು ರೂಪಿಸುವ ಮಾನದಂಡವಾಗಿದೆ ಎಂದು ಜಿಎಚ್‌ಎಸ್‌ಎಸ್ ಪೈವಳಿಕೆಯ ಜಯಕುಮಾರ್ ತಿಳಿಸಿದರು.
ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸಭಾಂಗಣದಲ್ಲಿ ಪೆರ್ಲ ಸಮೀಪದ ಕುರಡ್ಕದ ಶ್ರೀ ದುರ್ಗಾ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನ, ಎಸ್ಸೆಸ್ಸೆಲ್ಸಿ ಹಾಗೂ ಪ್ಲಸ್‌ಟು ವಿಭಾಗಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂದಿರದ ಪ್ರಧಾನ ಅರ್ಚಕ ಐತ್ತು ನಾಯ್ಕ ಸಮಾರಂಭ ಉದ್ಘಾಟಿಸಿದರು. ಶಿಕ್ಷಕ ಗಣೇಶ್ ಕುಮಾರ್ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ‘ಸೆಕೆಂಡ್ ಡಾನ್ ಬ್ಲಾೃಕ್ ಬೆಲ್ಟ್’ ಪದವಿ ಪಡೆದ ಕಾಸರಗೋಡಿನ ಕರಾಟೆ ಪಟು ಸೌಮ್ಯಾ ಚೆಂಬ್ರಕಾನ ಅವರನ್ನು ಸನ್ಮಾನಿಸಲಾಯಿತು.
ಪಡ್ರೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಉಷಾ ಕುಮಾರಿ, ಎಣ್ಮಕಜೆ ಗ್ರಾಪಂ ಸದಸ್ಯೆ ಸೌಧಾಬಿ ಹನೀಫ್, ನಿವೃತ್ತ ಮುಖ್ಯಶಿಕ್ಷಕ ಜನಾರ್ದನ ಮಾಸ್ಟರ್ ಉಪಸ್ಥಿತರಿದ್ದರು. ಹರ್ಷಿತಾ, ಸೌಮ್ಯಾ, ಮೇಘಶ್ರೀ ಹಾಗೂ ಪ್ರಸೀದಾ ಪ್ರಾರ್ಥಿಸಿದರು. ರಮೇಶ್ ಸ್ವಾಗತಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net