ರಕ್ತದಾನ ಮಾಡಲು ಒಳ್ಳೆಯ ಮನಸ್ಸು ಮುಖ್ಯ

ರಕ್ತದಾನ ಶಿಬಿರವನ್ನು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ಕುವಾರ್ ಶೆಟ್ಟಿ ಧನ್ಯಾಡಿ ಮನೆ ಉದ್ಘಾಟಿಸಿ ವಾತನಾಡಿದರು. ಬಿ.ಕರುಣಾಕರ ಶೆಟ್ಟಿ, ಜಯಕರ ಶೆಟ್ಟಿ, ರಾಮಚಂದ್ರ ಭಟ್, ರಾಧಾ ಪೂಜಾರ್ತಿ ಮತ್ತಿತರರಿದ್ದರು.
ರಕ್ತದಾನ ಶಿಬಿರವನ್ನು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ಕುವಾರ್ ಶೆಟ್ಟಿ ಧನ್ಯಾಡಿ ಮನೆ ಉದ್ಘಾಟಿಸಿ ವಾತನಾಡಿದರು. ಬಿ.ಕರುಣಾಕರ ಶೆಟ್ಟಿ, ಜಯಕರ ಶೆಟ್ಟಿ, ರಾಮಚಂದ್ರ ಭಟ್, ರಾಧಾ ಪೂಜಾರ್ತಿ ಮತ್ತಿತರರಿದ್ದರು.
Published on
ಕೋಟ: ರಕ್ತದಾನ ಶ್ರೇಷ್ಠ ದಾನದಲ್ಲಿ ಒಂದಾಗಿದ್ದು ಇದಕ್ಕೆ ಬಂಡವಾಳ ಬೇಡ ಬದಲಾಗಿ ಒಳ್ಳೆಯ ಮನಸ್ಸು ಮುಖ್ಯವಾಗಿದೆ. ಬದುಕು ನಮಗಾಗಿ ಅಲ್ಲ, ವಾನವ ಸಂ ಜೀವಿ, ಸಮುದಾಯದ ಜತೆ ಬೆರೆತು ಸಂಪರ್ಕದ ಕೊಂಡಿಗಳನ್ನು ಬೆಸೆದು ಬದುಕಿ ಬಾಳಿದಾಗ ಬದುಕಿಗೊಂದು ಸಂತೃಪ್ತಿ ದೊರಕುತ್ತದೆ ಎಂದು ಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ಕುವಾರ್‌ಶೆಟ್ಟಿ ಧನ್ಯಾಡಿ ಮನೆ ಹೇಳಿದರು.
ಬೇಳೂರು ದೇಲಟ್ಟು ಚಾರ್ಮಕ್ಕಿ ನಾರಾಯಣ ಶೆಟ್ಟಿ ಸಭಾ ಭವನದಲ್ಲಿ ದೇಲಟ್ಟು ಬೇಳೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂ, ಅಯ್ಯಪ್ಪ ಭಕ್ತವೃಂದ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಕುಂದಾಪುರ 2, ದೇಲಟ್ಟು ಫ್ರೆಂಡ್ಸ್ ಬೇಳೂರು, ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಸಹಯೋಗದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬೇಳೂರು ಗ್ರಾಮದಲ್ಲಿ ಅತಿ ಹೆಚ್ಚು ರಕ್ತದಾನ ವಾಡಿದ ನಿತ್ಯಾನಂದ ಕೊಠಾರಿ ದೇಲಟ್ಟು, ಜಯಲಕ್ಷ್ಮೀ ಬಾಲಕೃಷ್ಣ ಐತಾಳ್, ಸಂತೋಷ್ ಪೂಜಾರಿ ದೇಲಟ್ಟು, ಗಣೇಶ್ ಮೊಗವೀರ ದೇಲಟ್ಟು, ನರಸಿಂಹ ಬೋವಿ, ರಕ್ಷಿತ್ ಶೆಟ್ಟಿ ದೇಲಟ್ಟು ಅವರನ್ನು ಗೌರವಿಸಲಾಯಿತು.
ಬೇಳೂರು ಗ್ರಾಪಂ ವಾಜಿ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆ ರಕ್ತ ನಿಧಿ ಅಧ್ಯಕ್ಷ ಜಯಕರ ಶೆಟ್ಟಿ, ಕೃಷಿಕ ಶಾನಾಡಿ ರಾಮಚಂದ್ರ ಭಟ್, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂದ ಅಧ್ಯಕ್ಷೆ ರಾಧಾ ಪೂಜಾರ್ತಿ, ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಧ್ಯಕ್ಷ ಬಸವ ಪೂಜಾರಿ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಕುಂದಾಪುರ ಟಕ ಯೋಜನಾಧಿಕಾರಿ ನಾರಾಯಣ ಪಾಲನ್, ಕೋಟ ಸಿಎ ಬ್ಯಾಂಕ್ ನಿರ್ದೇಶಕ ಮಹೇಶ್ ಶೆಟ್ಟಿ, ಸಿಎ ಬ್ಯಾಂಕ್ ವಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ಕೆದೂರು ಗ್ರಾಪಂ ಅಧ್ಯಕ್ಷ ಉಳ್ಳೂರು ಪ್ರಶಾಂತ್ ಶೆಟ್ಟಿ, ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಸುಧೀರ್ ಶೆಟ್ಟಿ ಮಲ್ಯಾಡಿ, ಬನ್ನಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿವೃತ್ತ ಮುಖ್ಯಶಿಕ್ಷಕ ಸುರೇಂದ್ರ ಶೆಟ್ಟಿ, ಹರೀಶ್ ಶೆಟ್ಟಿ ದೇಲಟ್ಟು ಉಪಸ್ಥಿತರಿದ್ದರು.
ಜಯಕರ ಶೆಟ್ಟಿ ಪ್ರಸ್ತಾವಿಸಿದರು. ಸೀತಾರಾಮ ಶೆಟ್ಟಿ ಸ್ವಾಗತಿಸಿ, ಪ್ರಗತಿ ಪ್ರಾರ್ಥಿಸಿದರು. ದಯಾನಂದ ಕೊಠಾರಿ ಸಂಟಿಸಿದರು. ನಿತ್ಯಾನಂದ ಕೊಠಾರಿ ದೇಲಟ್ಟು ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net