

ಸರ್ವೇ ಜನಾ: ಸುಖಿನೋ ಭವಂತು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಭಾರತ ದೇಶದ ಎಲ್ಲ ವಾಸಿಗರಿಗೂ ಒಳಿತಾಗಲೆಂಬ ಆಸೆಯನ್ನೇ ಹೊಂದಿದ್ದಾರೆ. ಅಧ್ಯಾತ್ಮದ ಶಕ್ತಿ ಮೂಲಕ ಸಮಗ್ರ ಭಾರತ ಕಟ್ಟುವ ಅವರ ಸಂಕಲ್ಪಕ್ಕೆ ಉಡುಪಿಯಲ್ಲಿ ನಡೆದ ಮೋದಿ ರೋಡ್ ಶೋ ಹಾಗೂ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ ಇನ್ನಷ್ಟು ಬಲ ನೀಡಿದೆ.