ಶಾರ್ಜಾದಲ್ಲಿ ಮೊಗ್ರಾಲ್ ಮೂಲದ ಬಾಲಕಿ ಸಾವು

Death
Death
Published on

ಕಾಸರಗೋಡು: ಶಾರ್ಜಾದಲ್ಲಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಮೊಗ್ರಾಲ್ ಮೂಲದ ಮುಬಾರಕ್ ಅಲಿ-ಮುರ್ಷಿದಾ ದಂಪತಿ ಪುತ್ರಿ ಸಫಾ (7) ಮೃತಪಟ್ಟಿರುವ ಘಟನೆ ಸೋಮವಾರ ಸಂಭವಿಸಿದೆ.

ಶಾರ್ಜಾದ ಅಲ್ ನಬ್ಬಾ ಪ್ರದೇಶದ ಫ್ಲಾೃಟ್‌ನಲ್ಲಿ ದಂಪತಿ ವಾಸವಿದ್ದು, ಬೆಳಗ್ಗೆ ಮುರ್ಷಿದಾ ಅವರು ಕೆಲಸಕ್ಕೆ ಹೋಗಿದ್ದರಿಂದ ಮುಬಾರಕ್ ಪುತ್ರಿಯೊಂದಿಗೆ ಫ್ಲಾೃಟ್‌ನಲ್ಲಿದ್ದರು. ಕೊಠಡಿಯಲ್ಲಿ ಆಟವಾಡುತ್ತಿದ್ದ ಸಫಾ ಕಿಟಕಿ ಮೂಲಕ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ.

ಗಂಭೀರ ಗಾಯಗೊಂಡ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಮುಬಾರಕ್ ದುಬೈ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ, ಮುರ್ಷಿದಾ ಶಾರ್ಜಾದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇವರು 8 ವರ್ಷಗಳಿಂದ ಶಾರ್ಜಾದಲ್ಲಿ ವಾಸಿಸುತ್ತಿದ್ದು, ಸಫಾ ಏಕ ಪುತ್ರಿಯಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net