ಮಂಜೇಶ್ವರ ಕುಲಾಲ ಸಂಘ ಆಟಿದ ಕೂಟ

 ಜಿಲ್ಲಾ ಕುಲಾಲ ಸಂಘ, ಮಂಜೇಶ್ವರ ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ರಾಮ ಕುಲಾಲ್ ಹಾಗೂ ದಿನೇಶ್ ಕುಲಾಲ್ ಅವರನ್ನು ಗೌರವಿಸಲಾಯಿತು. ಕೊರಗಪ್ಪ ಬಂಗೇರ ಮಣಿಹಳ್ಳ, ಗೋಪಾಲ ಸಾಲ್ಯಾನ್ ಕುಂಜತ್ತೂರು ಮೊದಲಾದವರಿದ್ದರು.
ಜಿಲ್ಲಾ ಕುಲಾಲ ಸಂಘ, ಮಂಜೇಶ್ವರ ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ರಾಮ ಕುಲಾಲ್ ಹಾಗೂ ದಿನೇಶ್ ಕುಲಾಲ್ ಅವರನ್ನು ಗೌರವಿಸಲಾಯಿತು. ಕೊರಗಪ್ಪ ಬಂಗೇರ ಮಣಿಹಳ್ಳ, ಗೋಪಾಲ ಸಾಲ್ಯಾನ್ ಕುಂಜತ್ತೂರು ಮೊದಲಾದವರಿದ್ದರು.
Published on
ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಶಾಖೆಯ ಮಹಾಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮ ಕುಂಜತ್ತೂರು ತೂಮಿನಾಡು ಜಿಲ್ಲಾ ಕುಲಾಲ ಸಮುದಾಯ ಭವನದಲ್ಲಿ ಭಾನುವಾರ ಜರುಗಿತು.
ಲಕ್ಕಣಪಾಲು ಮೂಲಸ್ಥಾನದ ಗೌರವಾಧ್ಯಕ್ಷ ಕೊರಗಪ್ಪ ಬಂಗೇರ ಮಣಿಹಳ್ಳ ಉದ್ಘಾಟಿಸಿದರು. ಮಂಜೇಶ್ವರ ಕುಲಾಲ ಶಾಖೆಯ ಅಧ್ಯಕ್ಷ ಗೋಪಾಲ ಸಾಲ್ಯಾನ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ವಕೀಲ ರವೀಂದ್ರ ಮುನ್ನಿಪ್ಪಾಡಿ, ತಾಲೂಕು ಪ್ರಚಾರ ಕಾರ್ಯಪ್ರಮುಖ್ ಪ್ರಶಾಂತ್ ಬಡಾಜೆ, ಮಂಜೇಶ್ವರ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರಾಮಚಂದ್ರ ಕುಲಾಲ್ ಕಣ್ವತೀರ್ಥ, ಉದ್ಯಮಿ ಬಾಲಕೃಷ್ಣ ಬಿ. ಉಪಸ್ಥಿತರಿದ್ದರು.
ಆಟಿ ತಿಂಗಳ ವಿಶೇಷತೆ ಬಗ್ಗೆ ಉಪನ್ಯಾಸಕಿ ರಂಜನಿ ಅಗರ್ತಬೈಲು ಮಾಹಿತಿ ನೀಡಿದರು. ಮಂಜೇಶ್ವರ ಕುಲಾಲ ಶಾಖೆಯ ವತಿಯಿಂದ ಹಿರಿಯ ಕೃಷಿಕ ರಾಮ ಕುಲಾಲ್ ಮಜಲು ಕುಂಜತ್ತೂರು ಹಾಗೂ ದಿನೇಶ್ ಕುಲಾಲ್ ಅಂಬಿತ್ತಡಿ ಅವರನ್ನು ಗೌರವಿಸಲಾಯಿತು. ಇಬ್ಬರು ವಿದ್ಯಾರ್ಥಿನಿಯರಿಗೆ ವಿದ್ಯಾನಿಧಿ ವಿತರಿಸಲಾಯಿತು.
ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ವರದಿ ವಾಚಿಸಿ, ಕೋಶಾಧಿಕಾರಿ ಜಗದೀಶ್ ಕುಲಾಲ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಈಶ್ವರ್ ಕುಲಾಲ್ ಕಣ್ವತೀರ್ಥ ನಿರೂಪಿಸಿದರು. ತಾರಾನಾಥ ಕುಲಾಲ್ ವಂದಿಸಿದರು. ವಿವಿಧ ಸ್ವರ್ಧೆಗಳು, ನೃತ್ಯ ಕಾರ್ಯಕ್ರಮ, ಆಟಿಮಾಸದ ವಿಶೇಷ ಭೋಜನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net