ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಆರಿಕ್ಕಾಡಿಯಲ್ಲಿ ತಂಗುದಾಣವಿಲ್ಲದೆ ಭಾರಿ ಸಮಸ್ಯೆಯಾಗಿತ್ತು, ರಸ್ತೆ ಬದಿಯಲ್ಲೇ ಬಸ್ಸುಗಳಿಗೆ ಕಾಯುತ್ತ ನಿಲ್ಲಬೇಕಿತ್ತು. ಈಗ ಮಳೆ ತೀವ್ರಗೊಂಡಿದ್ದು ಪ್ರಯಾಣಿಕರ ಸಮಸ್ಯೆ ಅರಿತ ಆರಿಫ್ ಹತ್ತು ಸಾವಿರಕ್ಕೂ ಹೆಚ್ಚು ರೂ. ವೆಚ್ಚ ಭರಿಸಿ ತಾತ್ಕಾಲಿಕವಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದಾರೆ. ಅವರ ಮಾದರಿ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.