ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್ನಿಂದ ವರ್ಗಾವಣೆಗೊಂಡ ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು. ರಮೇಶ್ ತಿಂಗಳಾಯ, ಫೆಲಿಶಾ ಡಿ'ಆಲ್ಮೇಡಾ, ವೆನಿಸಾ ಪಿಂಟೊ, ಬ್ಲೆಸಿಲ್ಲಾ ಕ್ರಾಸ್ತಾ, ದೊನಾತ್ ಡಿ'ಆಲ್ಮೇಡಾ, ಜೇನ್ ಡಿಸೋಜಾ, ಸಿಸ್ಟರ್ ಸುಶ್ಮಾ ಲೂವಿಸ್, ಕುಮಾರ್ ಸಾಲಿನ್ಸ್, ಶಾಂತಿ ಫೆರ್ನಾಂಡಿಸ್ ಇದ್ದರು.
Published on:
Copied
Follow Us
* ರಮೇಶ್ ತಿಂಗಳಾಯ ಅಭಿಪ್ರಾಯ
* ವರ್ಗಾವಣೆಗೊಂಡ ಫಾದರ್ಗೆ ಬೀಳ್ಕೊಡುಗೆ
ಉಡುಪಿ: ಜಾತಿ, ಧರ್ಮದ ಗೋಡೆ ಕೆಡವಿ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವ ಮೂಲಕ ತೊಟ್ಟಂ ಪರಿಸರ ಮಾದರಿಯಾಗಿದೆ. ಅದಕ್ಕೆ ತೊಟ್ಟಂ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಅವರು ಕಾರಣೀಕರ್ತರಾಗಿದ್ದಾರೆ. ಎಲ್ಲೆಲ್ಲೋ ಇದ್ದ ಅನ್ಯ ಧಮೀರ್ಯರನ್ನು ಸರ್ವಧರ್ಮ ಸಮನ್ವಯ ಸಮಿತಿಯ ಮೂಲಕ ಒಗ್ಗೂಡಿಸಿ ಪರಸ್ಪರ ಹತ್ತಿರ ಬರುವಂತೆ ಮಾಡಿದ ಕೀರ್ತಿ, ಸಾಧನೆ ಅವರದು ಎಂದು ಸಮಿತಿಯ ಅಧ್ಯಕ್ಷ ರಮೇಶ್ ತಿಂಗಳಾಯ ಅಭಿಪ್ರಾಯಪಟ್ಟರು.
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್ನಲ್ಲಿ 4 ವರ್ಷ ಸೇವೆ ಸಲ್ಲಿಸಿ ಉಡುಪಿಯ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರುವಾಗಿ ವರ್ಗಾವಣೆಗೊಂಡ ಡೆನಿಸ್ ಡೆಸಾ ಅವರಿಗೆ ತೊಟ್ಟಂ ಚರ್ಚ್ ವತಿಯಿಂದ ಸರ್ವ ಧಮೀರ್ಯರ ಸಹಭಾಗಿತ್ವದಲ್ಲಿ ಭಾನುವಾರ ಸಂಜೆ (ಏ.26) ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಚರ್ಚ್ ಪಾಲನಾ ಮಂಡಳಿ, ಸಮನ್ವಯ ಸರ್ವಧರ್ಮ ಸಮಿತಿ, ಜಮಾತೆ ಇ ಇಸ್ಲಾಮಿ ಹಿಂದ್ ಸಂಘಟನೆ, ಚರ್ಚ್ನ ವಿವಿಧ ವಾಳೆಗಳು, ಸಂಘಟನೆಗಳು ಹಾಗೂ ಧರ್ಮಭಗಿನಿಯರ ಪರವಾಗಿ ಡೆಸಾ ಅವರನ್ನು ಸನ್ಮಾನಿಸಲಾಯಿತು.
ಫೆಲಿಶಾ ಡಿ'ಆಲ್ಮೇಡಾ, ವೆನಿಸಾ ಪಿಂಟೊ, ಬ್ಲೆಸಿಲ್ಲಾ ಕ್ರಾಸ್ತಾ, ದೊನಾತ್ ಡಿ'ಆಲ್ಮೇಡಾ ಮತ್ತು ಜೇನ್ ಡಿಸೋಜಾ ಮಾತನಾಡಿ, ಧರ್ಮಗುರುಗಳ ಸೇವೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಕಾನ್ವೆಂಟ್ನ ಮುಖ್ಯಸ್ಥೆ ಸಿಸ್ಟರ್ ಸುಶ್ಮಾ ಲೂವಿಸ್, ಸಿಎಸ್ಐ ಎಬೆನೇಜರ್ ಚರ್ಚ್ ಮಲ್ಪೆಯ ಸಭಾಪಾಲಕ ವಂ. ಕುಮಾರ್ ಸಾಲಿನ್ಸ್, ಚರ್ಚ್ ಪಾಲನಾ ಸಮಿತಿಯ 20 ಆಯೋಗಗಳ ಸಂಯೋಜಕಿ ಶಾಂತಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್ ಸ್ವಾಗತಿಸಿದರು. ಉಪಾಧ್ಯಕ್ಷೆ ಲೆಸ್ಲಿ ಆರೋಜಾ ವಂದಿಸಿದರು. ಕ್ಲಾರೆನ್ಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ತೊಟ್ಟಂ ಚರ್ಚ್ನ ನೂತನ ಧರ್ಮಗುರುಗಳಾಗಿ ಪ್ರಸ್ತುತ ಅಜೆಕಾರು ಪವಿತ್ರ ಹೃದಯ ಚರ್ಚ್ನ ಧರ್ಮಗುರು ವಂ.ಹೆನ್ರಿ ಮಸ್ಕರೇನ್ಹಸ್ ಅವರು ಮೇ ಮೊದಲ ವಾರದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
"
ತೊಟ್ಟಂ ಚರ್ಚ್ನಲ್ಲಿ ನನಗೆ ಸೇವೆ ಸಲ್ಲಿಸುವ ಅವಕಾಶ, ಭಕ್ತವೃಂದದ ಸಹಕಾರದಿಂದ ಅಭಿವೃದ್ಧಿ ಮಾಡಲು ದೇವರು ನನ್ನೊಡನೆ ಇದ್ದು ಮುನ್ನಡೆಸಿದ್ದರಿಂದ ಸಾಧ್ಯವಾಗಿದೆ. ವರ್ಗಾವಣೆಗೊಂಡು ತೆರಳುವಾಗ ಚರ್ಚ್ನಲ್ಲಿ ನಾಯಕತ್ವ, ಸೇವಾ ಮನೋಭಾವದ ಗುಣ ಬೆಳೆಸಿದ ತೃಪ್ತಿಯೊಂದಿಗೆ ತೆರಳುತ್ತಿದ್ದೇನೆ. 4 ವರ್ಷ ನನಗೆ ನೀಡಿದ ಸಹಕಾರಕ್ಕೆ ಧನ್ಯವಾದ ತಿಳಿಸುತ್ತೇನೆ.