ಶಿಲ್ಪ ಅಧ್ಯಯನ ಕೇಂದ್ರ, ಮ್ಯೂಸಿಯಂ ಸ್ಥಾಪನೆ ಕನಸು

ಆನೆಗುಂದಿ ಶ್ರೀಗಳ ವರ್ಧಂತ್ಯುತ್ಸವ ಅಂಗವಾಗಿ ಪಡುಕುತ್ಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಹೊನ್ನಪ್ಪಾಚಾರ್​ ಅವರಿಗೆ ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಮುಖರಾದ ಸುಜ್ಞಾನ ಮೂರ್ತಿ, ವಿ.ಶ್ರೀಧರ ಆಚಾರ್ಯ, ನೀಲೇಶ್​ ವಿಶ್ವಕರ್ಮ ಮೊದಲಾದವರಿದ್ದರು.
ಆನೆಗುಂದಿ ಶ್ರೀಗಳ ವರ್ಧಂತ್ಯುತ್ಸವ ಅಂಗವಾಗಿ ಪಡುಕುತ್ಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಹೊನ್ನಪ್ಪಾಚಾರ್​ ಅವರಿಗೆ ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಮುಖರಾದ ಸುಜ್ಞಾನ ಮೂರ್ತಿ, ವಿ.ಶ್ರೀಧರ ಆಚಾರ್ಯ, ನೀಲೇಶ್​ ವಿಶ್ವಕರ್ಮ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆನೆಗುಂದಿ ಸ್ವಾಮೀಜಿ ಆಶೀರ್ವಚನ
  • ಪಟ್ಟಾಭಿಷೇಕ ವರ್ಧಂತ್ಯುತ್ಸವ ಧಾರ್ಮಿಕ ಸಭೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶಿಲ್ಪ ಅಧ್ಯಯನ ಕೇಂದ್ರ ಮತ್ತು ಶಿಲ್ಪ ಮ್ಯೂಸಿಯಂ ಕೇಂದ್ರ ಸ್ಥಾಪಿಸಬೇಕೆಂಬ ಮಹದಾಸೆಯಿದೆ. ಅದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ಮಂಗಳವಾರ ನಡೆದ ಶ್ರೀಗಳ 16ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್​ ಮಾತನಾಡಿದರು. ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.

ಗಣ್ಯರ ಉಪಸ್ಥಿತಿ

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ.ಸುಜ್ಞಾನ ಮೂರ್ತಿ, ಬಿ.ಶ್ರೀಕಂಠಾಚಾರ್​, ನಿಲೇಶ್​ ವಿಶ್ವಕರ್ಮ, ಶ್ರೀಧರ ವಿ.ಆಚಾರ್ಯ, ಹೇಮಚಂದ್ರ ಆಚಾರ್ಯ, ಎಸ್​.ಆರ್​.ಹರೀಶ್​ ಆಚಾರ್​, ಉಪೇಂದ್ರ ಆಚಾರ್ಯ, ಆಸ್ಥಾನ ವಿದ್ವಾಂಸ ಶಂಕರ ಆಚಾರ್ಯ ಕಡ್ಲಾಸ್ಕರ್​, ಪಿ.ವಿ.ಗಂಗಾಧರ ಆಚಾರ್ಯ, ದಿನೇಶ್​ ಆಚಾರ್ಯ, ನಾಗರಾಜ ಆಚಾರ್ಯ, ಉಮೇಶ್​ ಆಚಾರ್ಯ, ಕಳಿ ಚಂದ್ರಯ್ಯ ಆಚಾರ್ಯ, ಕೆ.ಪ್ರಭಾಕರ ಆಚಾರ್ಯ, ಮಧುಕರ ಚಂದ್ರಶೇಖರ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಮುರಹರಿ ಆಚಾರ್ಯ, ರಾಮಚಂದ್ರ ಆಚಾರ್ಯ, ಗಣೇಶ ಆಚಾರ್ಯ, ಸುಂದರ ಆಚಾರ್ಯ, ಬಿ.ಎಂ.ಯದುನಂದನ ಆಚಾರ್ಯ, ಜನಾರ್ದನ ಆಚಾರ್ಯ, ಗಜಾನನ ಆರ್.ಆಚಾರ್ಯ, ನಾಗರಾಜ ಹಾವನೂರ, ದತ್ತಾ ಎಂ.ಆಚಾರ್ಯ, ಜಗದೀಶ್​ ಆಚಾರ್ಯ, ಗುರುನಾಥ ಪಟ್ಟಣಕೋಡಿ, ಬಿ.ಸೂರ್ಯ ಕುಮಾರ್​ ಆಚಾರ್ಯ, ಗಣೇಶ್​ ಆಚಾರ್ಯ, ಸುಂದರ ಆಚಾರ್ಯ, ಸಂಧ್ಯಾ ಲಕ್ಷ$್ಮಣ ಆಚಾರ್ಯ, ಕೇಶವ ಶರ್ಮ, ಕೃಷ್ಣ ವಿ.ಆಚಾರ್ಯ ಉಪಸ್ಥಿತರಿದ್ದರು.
ಲೋಕೇಶ್​ ಎಂ.ಬಿ.ಆಚಾರ್​ ಸ್ವಾಗತಿಸಿದರು. ಗಂಗಾಧರ ಆಚಾರ್ಯ ಹಾಗೂ ಬಾಲಕೃಷ್ಣ ಹೊಸಂಗಡಿ ನಿರೂಪಿಸಿದರು. ಅರವಿಂದ ಆಚಾರ್ಯ ವಂದಿಸಿದರು.

ಆನೆಗುಂದಿ ಶ್ರೀ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳ ಸಾಧಕರಾದ ನಾಗಭೂಷಣ ಆಚಾರ್ಯ, ಸಿ.ವಿ.ಪೊದುವಾಳ್​, ವಾದಿರಾಜ ಆಚಾರ್ಯ, ಎಸ್​.ಪಿ.ಗುರುದಾಸ್​, ವಿಘ್ನೇಶ್ವರ ಪುರೋಹಿತ್​, ಕೃಷ್ಣ ಆಚಾರ್ಯ ನಕ್ರೆ ಅವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಹಾಗೂ ಭೀಮಸೇನ ಬಡಿಗೇರ, ಮಾನಯ್ಯ ಎನ್​.ಬಡಿಗೇರ, ಹೊನ್ನಪ್ಪಾಚಾರ್​, ಪ್ರಭಾಕರ ಗೋವಿಂದ ಆಚಾರ್ಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಪ್ರತಿಭಾನ್ವಿತರಾದ ಪ್ರಮೋದ್​ ಸಿ.ಕೆ., ಮನೋಜ್ಞ ಟಿ.ಆಚಾರ್ಯ ಅವರನ್ನು ಗೌರವಿಸಲಾಯಿತು. ಮಹಾದಾನಿಗಳನ್ನು ಅಭಿನಂದಿಸಲಾಯಿತು.

ವೈದಿಕ ವಿಧಿವಿಧಾನಗಳು

ಕಟಪಾಡಿ ಶ್ರೀ ಮಹಾಸಂಸ್ಥಾನದಲ್ಲಿ ಪಟ್ಟಾಭಿಷೇಕ ವರ್ಧಂತಿಗೆ ಸಂಬಂಧಿಸಿದ ವೈದಿಕ ವಿಧಿವಿಧಾನಗಳು ನೆರವೇರಿತು. ಶ್ರೀ ನಾಗಧಮೇರ್ಂದ್ರ ಸರಸ್ವತಿ ಸ್ವಾಮೀಜಿ ವೃಂದಾವನದಲ್ಲಿ ಪೂಜೆ, ಸರಸ್ವತಿ ಯಾಗಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ ಹಾಗೂ ಸಾಮೂಹಿಕ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಿತು. ಜಗದ್ಗುರುಗಳ 50ನೇ ಜನ್ಮವರ್ಧಂತಿ ವರ್ಷಾಚರಣೆ ಅಂಗವಾಗಿ ವಿವಿಧ ಮಹತ್ವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕುಲಗುರು ಪೀಠ ಜಾಗೃತಿ ಹಾಗೂ ಸಾಂಸತಿಕ ಪಂಚಪ್ರಬೋಧನ ಸಂಕಲ್ಪದ ಸುವರ್ಣ ಸಂಕಲ್ಪ ಅಭಿಯಾನ ಪ್ರಾರಂಭೋತ್ಸವ, ಶ್ರೀ ಸರಸ್ವತಿ ಹೌಸಿಂಗ್​ ಸೊಸೈಟಿ ಯೋಜನೆ ಲೋಕಾರ್ಪಣೆ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net